ಕ್ರೀಡೆ

ವಿಶ್ವಕಪ್ ನಲ್ಲಿ ಧೋನಿ ಸಾನಿಧ್ಯ ಮುಖ್ಯ: ಯುವಿ

ಮುಂಬೈ,ಫೆ.9-ವಿಶ್ವಕಪ್ ನಲ್ಲಿ ಹಿರಿಯ ಹಾಗೂ ಅನುಭವಿ ಬ್ಯಾಟ್ಸ್ ಮನ್ ಮಹೇಂದ್ರಸಿಂಗ್ ಧೋನಿ ಸಾನಿಧ್ಯ ಅತಿ ಮುಖ್ಯ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ನನಗನಿಸುತ್ತದೆ ಧೋನಿ ಅತ್ಯುತ್ತಮ ಕ್ರಿಕೆಟ್ ಮೆದುಳನ್ನು ಹೊಂದಿದ್ದಾರೆ. ಓರ್ವ ಕ್ರಿಕೆಟ್ ಕೀಪರ್ ಆಗಿ ವಿಕೆಟ್ ಹಿಂದುಗಡೆ ನಿಂತು ಪಂದ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಅವರೊಬ್ಬ ಶ್ರೇಷ್ಠ ನಾಯಕ ಕೂಡಾ ಹೌದು. ಅದರಲ್ಲೂ ಯುವ ಆಟಗಾರರು ಹಾಗೂ ನಾಯಕ ವಿರಾಟ್ ಕೊಹ್ಲಿಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತಿರುತ್ತಾರೆ ಎಂದಿದ್ದಾರೆ.

ವಿರಾಟ್ ಕೊಹ್ಲಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಆತನಿಗೆ ಮಾರ್ಗದರ್ಶನ ನೀಡುವುದರಲ್ಲಿ ಧೋನಿ ಸಾನಿಧ್ಯ ನಿರ್ಣಾಯಕವೆನಿಸಲಿದೆ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೇಳಿದಾಗ, ಅದನ್ನು ನೀವು ಧೋನಿ ಅವರಲ್ಲೇ ಕೇಳಬೇಕು ಎಂಬುದನ್ನು ಸ್ಪಷ್ಟಪಡಿಸಿದರು. ಹಾಗೆಯೇ ಅವರು ಬಯಸಿದ ಕ್ರಮಾಂಕ ನೀಡಬೇಕು ಎಂದರು.

ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿರುವ ಯುವಿ ಐಪಿಎಲ್ನಲ್ಲಿ ಶ್ರೇಷ್ಠ ನಿರ್ವಹಣೆ ನೀಡುವ ಮೂಲಕ ಟೀಮ್ ಇಂಡಿಯಾ ಕಮ್ಬ್ಯಾಕ್ ಎದುರು ನೋಡುತ್ತಿದ್ದಾರೆ. ಏತನ್ಮಧ್ಯೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಗಮನಾರ್ಹ ಇನ್ನಿಂಗ್ಸ್ ಕಟ್ಟುವ ಭರವಸೆ ನೀಡಿದರು. ಇದಕ್ಕಾಗಿ ದಿನನಿತ್ಯ ತರಬೇತಿ ನಡೆಸುತ್ತಿದ್ದೇನೆ ಎಂದರು. (ಎಂ.ಎನ್)

Leave a Reply

comments

Related Articles

error: