ಮನರಂಜನೆ

ಕಿರುತೆರೆಯ ಕ್ಯೂಟ್ ಜೋಡಿಯ ವಿವಾಹ ದಿನಾಂಕ ನಿಗದಿ

ಬೆಂಗಳೂರು,ಫೆ.9-ಕಿರುತೆರೆಯ ಕ್ಯೂಟ್ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಮೇ 12, 13 ರಂದು ವಿವಾಹವಾಗಲಿದ್ದಾರೆ.

‘ಕುಲವಧು’ ಧಾರಾವಾಹಿ ಖ್ಯಾತಿಯ ವಚನಾ ಅಲಿಯಾಸ್ ಅಮೃತಾ ರಾಮಮೂರ್ತಿ ಹಾಗೂ ನಮ್ಮನೆ ಯುವರಾಣಿಯಲ್ಲಿ ಸಾಕೇತ್ ಪಾತ್ರಧಾರಿಯಾಗಿ ಅಭಿನಯಿಸುತ್ತಿರುವ ರಘು ಮದುವೆಯಾಗುತ್ತಿದ್ದಾರೆ.

ಜೀ ವಾಹಿನಿಯಲ್ಲಿ ಬರುತ್ತಿದ್ದ `ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ಒಟ್ಟಿಗೆ ಅಭಿನಯಿಸಿದ್ದ ರಘು ಮತ್ತು ಅಮೃತಾ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರ ಪ್ರೀತಿಗೆ ಕುಟುಂಬದವರು ಒಪ್ಪಿಗೆ ನೀಡಿದ್ದಾರೆ.

ಇತ್ತೀಚೆಗೆ ರಘು ರಘು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ‘ಇಟ್ಸ್ ಅಫಿಷಿಯಲ್. ನಿಜ ಜೀವನದಲ್ಲೂ ಮಿ. ಆಯಂಡ್ ಮಿಸಸ್ ರಂಗೇಗೌಡ… ಜೀವನದ ಮೌಲ್ಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ವಂಡರ್‌ಫುಲ್ ಹುಡುಗಿ ನನಗೆ ಸಿಕ್ಕಿದ್ದಾಳೆ. ಥ್ಯಾಂಕ್ಸ್ ನನ್ನ ಜೀವನದಲ್ಲಿ ಬಂದಿದ್ದಕ್ಕೆ. ಇನ್ನು ನಾನೇ ಸ್ಟ್ರಾಂಗೆಸ್ಟ್‘ ಎಂದು ಬರೆದು ಕೊಂಡಿದ್ದಾರೆ. ಆ ಮೂಲಕ ಈ ಜೋಡಿ ಹಸೆಮಣೆ ಏರುತ್ತಿರುವುದನ್ನು ಕನ್ಫರ್ಮ್ ಮಾಡಿದ್ದರು.

ಮಾರ್ಚ್ 7ರಂದು ಹುಟ್ಟು ಹಬ್ಬ ಆಚರಿಸಿಕೊಂಡ ಅಮೃತಾ ಬರ್ತ್ ಡೇ ಪೋಸ್ಟಿನಲ್ಲಿ ‘ವಾಡ್ರೋಬ್ ಐಡಿಯಾ‘ ಎಂದು ಧರಿಸಿರುವ ಉಡುಪಿಗೆ ಐಡಿಯಾ ಕೊಟ್ಟ ರಘು ಅವರಿಗೆ ಥ್ಯಾಂಕ್ಸ್ ಹೇಳಿದ್ದರು. ಆಗಲೇ ಈ ಇಬ್ಬರ ನಡುವೆ ಕುಚು ಕುಚು ನಡೆಯುತ್ತಿದೆ ಎಂಬ ಗಾಸಿಪ್ ಕೇಳಿ ಬಂದಿತ್ತು.

ಅಮೃತಾ ‘H/34 ಪಲ್ಲವಿ ಟಾಕಿಸ್‘ ಹಾಗೂ ‘ಸೈಕೋ ಶಂಕ್ರ‘ದಲ್ಲಿಯೂ ಅಭಿನಯಿಸಿದ್ದಾರೆ. ರಘು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ದೇವಯಾನಿ ಧಾರವಾಹಿಯಲ್ಲೂ ಅಭಿನಯಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: