ಸುದ್ದಿ ಸಂಕ್ಷಿಪ್ತ

ಐಎಫ್ಎಸ್ ಪರೀಕ್ಷೆಯಲ್ಲಿ 50ನೇ ರ್ಯಾಂಕ್ ಪಡೆದ ಎನ್.ಲಕ್ಷ್ಮೀ

ಮೈಸೂರು,ಫೆ.9-ನವೋದಯ ಫೌಂಡೇಶನ್ ಮತ್ತು ಪ್ರಮತಿ ಹಿಲ್ ವ್ಯೂ ಅಕಾಡೆಮಿ ವತಿಯಿಂದ ನಡೆಸುತ್ತಿರುವ ನವೋಪ್ರಮತಿ ಸ್ಕೂಲ್ ಆಫ್ ಸಿವಿಲ್ ಸರ್ವಿಸಸ್ ನಲ್ಲಿ ತರಬೇತಿ ಪಡೆದ ಎನ್.ಲಕ್ಷ್ಮೀ ಮಾಹಿತಿ ವಿಜ್ಞಾನದಲ್ಲಿ ಪದವಿ ಪಡೆದಿದ್ದಾಳೆ.

ಯುಪಿಎಸ್ ಸಿ ಪರೀಕ್ಷೆಯಲ್ಲಿ ಸತತ ಮೂರನೇ ಪ್ರಯತ್ನದಲ್ಲಿ ಐಎಫ್ಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದು, ರಾಷ್ಟ್ರಮಟ್ಟದಲ್ಲಿ 50ನೇ ರ್ಯಾಂಕ್ ಪಡೆದಿದ್ದಾರೆ. 2018 ರಲ್ಲಿ ಯುಪಿಎಸ್ ಸಿ (ಐಎಎಸ್, ಐಪಿಎಸ್, ಐಆರ್ ಎಸ್), ಮುಂತಾದ ಸಿವಿಲ್ ಸರ್ವೀಸ್ ವಿಭಾಗಗಳಲ್ಲಿಯೂ ಈಕೆ ಮುಖ್ಯ ಪರೀಕ್ಷೆಯನ್ನು ಎದುರಿಸಿ ಫೆ.15 ರಂದು ನಡೆಯಲಿರುವ ಯುಪಿಎಸ್ ಸಿ ಮೌಖಿಕ ಪರೀಕ್ಷೆಯನ್ನು ಎದುರಿಸಲು ತಯಾರಿ ನಡೆಸುತ್ತಿದ್ದಾಳೆ. ಅಂದು ನಡೆಯುವ ಸಂದರ್ಶನದಲ್ಲಿಯೂ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಲೆಂದು ನವೋ ಪ್ರಮತಿ ಸಂಚಾಲಕರಾದ ಬೆಂಗಳೂರು ಪಶ್ಚಿಮದ ಡಿಸಿಪಿ ರವಿ ಡಿ.ಚೆನ್ನಣ್ಣನವರ್, ನಮೋ ಪ್ರಮತಿ ಕಾರ್ಯದರ್ಶಿ ಹೆಚ್.ವಿ.ರಾಜೀವ್, ಸಂಯೋಜಕರಾದ ಡಾ.ಎಸ್.ಆರ್.ರವಿ ಅವರು ಲಕ್ಷ್ಮೀ ಅವರನ್ನು ಅಭಿನಂದಿಸಿದ್ದಾರೆ.

ಮೂಲತಃ ತಮಿಳುನಾಡಿನ ಕೊಯಮತ್ತೂರಿನವರಾದ ಇವರು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಎಂ.ನಾಗಪ್ಪನ್, ಎನ್.ಲಕ್ಷ್ಮೀ ದಂಪತಿಯ ಪುತ್ರಿ. (ಎಂ.ಎನ್)

 

Leave a Reply

comments

Related Articles

error: