ಸುದ್ದಿ ಸಂಕ್ಷಿಪ್ತ

ಫೆ.11 ರಂದು ಕೃತಿ ಲೋಕಾರ್ಪಣೆ

ಮೈಸೂರು,ಫೆ.9 : ಮೈವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಭಾರತೀ ಪ್ರಕಾಶನದ ವತಿಯಿಂದ ಡಾ.ಎಚ್.ತಿಪ್ಪೇರುದ್ರಸ್ವಾಮಿ ಸಮಗ್ರ ಸಾಹಿತ್ಯಮಾಲೆಯ ಸಂಪುಟ ‘ವಿಮರ್ಶಾ ಸಾಹಿತ್ಯ-1 ಕೃತಿ ಲೋಕಾರ್ಪಣೆಯನ್ನು ಫೆ.11ರ ಮಧ್ಯಾಹ್ನ 2.30ಕ್ಕೆ ಬಿ.ಎಂ.ಶ್ರೀಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಕೃತಿ ಬಿಡುಗಡೆಗೊಳಿಸುವರು. ವಿಮರ್ಶಕ ಡಾ.ಓ.ಎಲ್.ನಾಗಭೂಷಣಸ್ವಾಮಿ ಕೃತಿ ಕುರಿತು ಮಾತನಾಡಿವರು, ಕೃತಿ ಸಮಪಾದಕಿ ಡಾ.ಎಚ್.ಟಿ.ಶೈಲಜ, ಪ್ರಕಾಶಕ ಬಿ.ಎನ್.ಶ್ರಿನಿವಾಸ ಇರುವರು. ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎನ್.ಎಂ.ತಳವಾರ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: