ಮೈಸೂರು

ವಾಟರ್ ಟ್ಯಾಂಕ್ ಮಗುಚಿ ಬಿದ್ದು ಯುವಕ ಸಾವು

ಮೈಸೂರು,ಫೆ.11:- ವಾಟರ್ ಟ್ಯಾಂಕ್ ಮಗುಚಿ ಬಿದ್ದು ಯುವಕನೋರ್ವ  ಸಾವನ್ನಪ್ಪಿದ ಘಟನೆ  ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದ ಬಳಿ  ನಡೆದಿದೆ.

ಮೃತರನ್ನು ಮೂಲತಃ ಮಂಡ್ಯ ಜಿಲ್ಲೆ ಮತ್ತಹಳ್ಳಿ ಗ್ರಾಮದ ನಿವಾಸಿ ಅಭಿಷೇಕ್ (22) ಎಂದು ಗುರುತಿಸಲಾಗಿದೆ. ವಾಟರ್ ಟ್ಯಾಂಕರ್ ನ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.  ರಸ್ತೆ ಕಾಮಗಾರಿಗೆ ನೀರು ಸರಬರಾಜು ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ತಡರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: