ಕ್ರೀಡೆ

ದೇಶ ಪ್ರೇಮ ಮೆರೆದ ಧೋನಿ

ಹ್ಯಾಮಿಲ್ಟನ್,ಫೆ.11-ನ್ಯೂಜಿಲೆಂಡ್ ವಿರುದ್ಧ ನಡೆದ ಕೊನೆಯ ಟಿ-20 ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ದೇಶಪ್ರೇಮ ಮೆರೆದು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಧೋನಿ ಅಭಿಮಾನಿಯೊಬ್ಬ ಭದ್ರತಾ ಕೋಟೆಯನ್ನು ಭೇದಿಸಿ ಮೈದಾನಕ್ಕೆ ನುಗ್ಗಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡ. ಈ ವೇಳೆ ಅಭಿಮಾನಿಯ ಕೈಯಲ್ಲಿದ್ದ ತ್ರಿವರ್ಣ ಧ್ವಜ ನೆಲಕ್ಕಪ್ಪಳಿಸಿತ್ತು. ತಕ್ಷಣ ಎಚ್ಚೆತ್ತುಕೊಂಡ ಧೋನಿ, ಅಭಿಮಾನಿಯ ಕೈಯಿಂದ ಬಾವುಟವನ್ನು ಪಡೆದರು. ಬಳಿಕ ಸುರಕ್ಷಿತವಾಗಿ ಅಧಿಕೃತರಿಗೆ ಹಂಚಿದರು. ಮೂಲಕ ದೇಶಪ್ರೇಮವನ್ನು ಮೆರೆದರು.

ಧೋನಿಗೆ ಇಂತಹ ಪರಿಸ್ಥಿತಿ ಎದುರಾಗುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಹಿಂದೆಯೂ ಅನೇಕ ಬಾರಿ ಮೈದಾನಕ್ಕೆ ಒಳನುಗ್ಗಿದ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಎಲ್ಲ ಪರಿಸ್ಥಿತಿಗಳನ್ನು ಶಾಂತಚಿತ್ತತೆಯಿಂದ ನಿಭಾಯಿಸುವ ಧೋನಿ ಅಭಿಮಾನಿಗಳ ಜತೆಗೆ ಸಂಯಮದಿಂದ ವರ್ತಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕಿವೀಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ರನ್ ನ ಅಂತರದಲ್ಲಿ ಸೋಲು ಅನುಭವಿಸಿದೆ. 213 ರನ್ ಗೆಲುವಿನ ಗುರಿ ಹಿಂಬಾಲಿಸಿದ ಭಾರತ 208 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 2-1 ಅಂತರದ ಸೋಲನ್ನು ಅನುಭವಿಸಿದೆ. (ಎಂ.ಎನ್)

Leave a Reply

comments

Related Articles

error: