ಕ್ರೀಡೆದೇಶ

ಅಭಿಮಾನಿಯಿಂದ ರಾಷ್ಟ್ರಧ್ವಜಕ್ಕೆ ಅಗೌರವ ತಪ್ಪಿಸಿದ ಧೋನಿ: ನೆಟ್ಟಿಗರಿಂದ ಭಾರೀ ಮೆಚ್ಚುಗೆ

ಮೈಸೂರು (ಫೆ.11): ಭಾರತ ನ್ಯೂಜಿಲ್ಯಾಂಡ್ ವಿರುದ್ಧದ‌ ಮೂರನೇ ಟಿ-20 ಪಂದ್ಯದಲ್ಲಿ‌ ಭಾರತ ಸೋಲುವ ಮೂಲಕ ಸರಣಿಯನ್ನು ಕಿವೀಸ್‍ಗೆ ಬಿಟ್ಟುಕೊಟ್ಟಿದ್ದರು, ಸೂಪರ್ ಕೂಲ್ ಧೋನಿಯ ನಡೆ ಇದೀಗ ವೈರಲ್ ಆಗಿದೆ‌.

ಮೂರನೇ ಪಂದ್ಯದಲ್ಲಿ ಭಾರತ ಫೀಲ್ಡಿಂಗ್ ಮಾಡುವ ವೇಳೆ, ಭಾರತದ ಅಭಿಮಾನಿಯೊಬ್ಬ ರಾಷ್ಟ್ರ ಧ್ವಜ ಹಿಡಿದು, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಬಳಿ ಓಡಿ ಬಂದು ನಮಸ್ಕರಿಸಲು‌ ಮುಂದಾದ. ಆದರೆ ಈ ವೇಳೆಗೆ ಭಾರತದ ಧ್ವಜ ನೆಲಕ್ಕೆ ತಾಕುವುದನ್ನು ನೋಡಿದ್ದರಿಂದ ಕೂಡಲೇ ಅಭಿಮಾನಿಯಿಂದ ಧ್ವಜ ಪಡೆದು ರಕ್ಷಣಾ ಸಿಬ್ಬಂದಿಗೆ ನೀಡಿದ್ದಾರೆ. ಇದೀಗ ಧೋನಿಯ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದು, ಧೋನಿ ಇದಕ್ಕೇ ಇಷ್ಟವಾಗುವುದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಧೋನಿಯೊಬ್ಬ ನಿಜವಾದ ರಾಷ್ಟ್ರ ಭಕ್ತ ಎಂದಿದ್ದಾರೆ.

Meanwhile living in the Society where people burning National flag _/_ Dhoni #NZvInd @msdhoni pic.twitter.com/L8EuB55osc
Son Of Sumathi ♥ Selvakumar (@Iam_Jaimsd) February 10, 2019

(ಎನ್.ಬಿ)

Leave a Reply

comments

Related Articles

error: