ಮನರಂಜನೆ

ಯಜಮಾನ ಟ್ರೇಲರ್ ಬಿಡುಗಡೆ: ಲಕ್ಷಕ್ಕೂ ಹೆಚ್ಚು ಹಿಟ್ಸ್

ಬೆಂಗಳೂರು,ಫೆ.11-ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಯಜಮಾನ’ ಸಿನಿಮಾದ ಟ್ರೇಲರ್ ಬಿಡುಗಡೆಯಾದ ಕೇವಲ 8 ನಿಮಿಷಗಳಲ್ಲಿ ಒಂದು ಲಕ್ಷ ಹಿಟ್ಸ್ ಪಡೆದುಕೊಂಡಿದೆ.

ಆಕ್ಷನ್, ಖಡಕ್ ಡೈಲಾಗ್ ಗಳ ಜೊತೆಗೆ ಮನೆ ಹುಡುಗನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಎಲ್ಲ ಅಂಶಗಳು ಇರುವ ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರವಾಗಲಿದೆ. ಸಿನಿಮಾದ ನಾಲ್ಕು ಹಾಡುಗಳು ಈಗಾಗಲೇ ಅದ್ಭುತ ಯಶಸ್ಸು ಕಂಡಿದೆ.

ರಶ್ಮಿಕಾ ಮಂದಣ್ಣ, ತಾನ್ಯ ಹೂಪೆ, ಧನಂಜಯ್, ಟಾಕೂರ್ ಅನೂಪ್ ಸಿಂಗ್ ಹಾಗೂ ರವಿಶಂಕರ್ ಟ್ರೇಲರ್ ನಲ್ಲಿ ಗಮನ ಸೆಳೆಯುತ್ತಾರೆ. ಟ್ರೇಲರ್ ನಲ್ಲಿ ಸಿನಿಮಾದ ಬಿಡುಗಡೆಯ ದಿನಾಂಕ ಕೂಡ ಅನೌನ್ಸ್ ಆಗಿದೆ. ಸಿನಿಮಾ ಮಾರ್ಚ್ 1 ರಂದು ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.

ಯಜಮಾನಹರಿಕೃಷ್ಣ ಹಾಗೂ ಪಿ.ಕುಮಾರ್ ನಿರ್ದೇಶಕದ ಚಿತ್ರವಾಗಿದೆ. ಶೈಲಜಾ ನಾಗ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: