ಮನರಂಜನೆ

ರಾಧಿಕಾ ಪಂಡಿತ್‍ ಪತಿಯ ಬಗ್ಗೆ ಅಭಿಮಾನಿಗಳ ಉದ್ಘಾರವಿದು..

ಬೆಂಗಳೂರು (ಫೆ.11): ಮಗು ಜನಿಸಿದ ಮೇಲೆ ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರವೇ ಇದ್ದ ನಟಿ ರಾಧಿಕಾ ಪಂಡಿತ್ ಅವರು ಈಗ ಮತ್ತೆ ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಲು ಆರಂಭಿಸಿದ್ದಾರೆ.

ಈ ನಡುವೆ ರಾಧಿಕಾ ಪಂಡಿತ್ ತಾವು ವಿಡಿಯೋ ಸಂದೇಶವನ್ನು ಮಾಡಲು ರೆಡಿಯಾಗುತ್ತಿರುವ ವಿಡಿಯೋ ಒಂದನ್ನು ಪ್ರಕಟಿಸಿ ನಾನು ಕೆಲವು ದಿನಗಳಿಂದ ಪ್ರಕಟಿಸುತ್ತಿದ್ದ ವಿಡಿಯೋಗಳಿಗೆ ಅದನ್ನು ಮಾಡಿದವರ ಕ್ರೆಡಿಟ್ ಕೊಟ್ಟಿರಲಿಲ್ಲ. ಈ ವಿಡಿಯೋ ನೋಡಿ ನನ್ನ ವಿಡಿಯೋ ಮಾಡುವವರು ಯಾರು ಎಂದು ಗೊತ್ತಾಗುತ್ತದೆ. ಇದನ್ನು ನೋಡಿದ ಮೇಲೆ ಯಾರು ವಿಡಿಯೋ ಮಾಡುವವರು ಎಂದು ಹೇಳಬೇಕಿಲ್ಲ ಅಲ್ವಾ? ಎಂದು ತಮಾಷೆಯಾಗಿ ಬರೆದುಕೊಂಡು ವಿಡಿಯೋ ಹಾಕಿದ್ದಾರೆ.

ಆ ವಿಡಿಯೋದಲ್ಲಿ ರಾಧಿಕಾಗೆ ತಯಾರಾಗಲು ಯಶ್ ತೆರೆ ಹಿಂದೆ ನಿಂತು ಸಲಹೆ ಸೂಚನೆ ನೀಡುವ ಮಾತುಕತೆ ಕೇಳಿಸುತ್ತಿದೆ. ಕೂದಲು ಸರಿ ಮಾಡ್ಕೋ ಎಂದು ಹೇಳುವ ಯಶ್ ರಾಧಿಕಾ ವಿಡಿಯೋ ಮಾಡಲು ರೆಡಿಯಾಗುತ್ತಿರುವ ಧ್ವನಿ ಕೇಳಿಸುತ್ತದೆ.

ಇದನ್ನು ನೋಡಿ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ರಾಧಿಕಾ ಅತ್ತಿಗೆ ನಿಮಗೆ ಎಷ್ಟು ಕೇರ್ ಮಾಡುವ, ಪ್ರೀತಿಸುವ ಗಂಡ ಸಿಕ್ಕಿದ್ದಾನೆ ಎಂದು ಹೊಗಳುತ್ತಿದ್ದಾರೆ. ಇನ್ನು ಕೆಲವರು ಗಂಡ ವಿಡಿಯೋ ಮಾಡುತ್ತಾನೆಂದರೆ ಎಷ್ಟು ಪ್ರೀತಿಯಿಂದ ರೆಡಿಯಾಗುತ್ತಿದ್ದಾರೆ ಎಂದು ರಾಧಿಕಾ ಕಾಲೆಳೆದಿದ್ದಾರೆ. ಮತ್ತೆ ಕೆಲವರು ನಮ್ಮ ಯಶ್ ಬಾಸ್ ಧ್ವನಿ ಕೇಳಿದ್ರೇ ಗೊತ್ತಾಗುತ್ತದೆ. ಇನ್ನು ಅವರ ಹೆಸರು ಹೇಳುವ ಅಗತ್ಯವೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: