ಪ್ರಮುಖ ಸುದ್ದಿಮೈಸೂರು

ಸಾಲ ಮರು ಪಾವತಿಸಲಾಗದ ಹಿನ್ನೆಲೆ: ರೈತ ನೇಣಿಗೆ ಶರಣು

ಬೆಳೆ ನಂಬಿ ಸಾಲ ಮಾಡಿದ ರೈತನೋರ್ವ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತೀವ್ರ ಹತಾಶನಾಗಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ.

ಮೃತನನ್ನು ಕೆ.ಆರ್.ನಗರ ತಾಲೂಕಿನ ಗೇರುದಡ ಗ್ರಾಮದ ಕೃಷ್ಣೇಗೌಡ(53) ಎಂದು ಗುರುತಿಸಲಾಗಿದೆ. ಇವರು ತಮ್ಮ ಎರಡೂವರೆ ಎಕರೆ ಜಮೀನನಲ್ಲಿ ಹಲಸಂದೆ, ರಾಗಿ, ಎಳ್ಳು ಹಾಗೂ ತರಕಾರಿ ಬೆಳೆಯಲು ಕಾವೇರಿ ಗ್ರಾಮೀಣ ಬ್ಯಾಂಕ್ನಿಂದ 1 ಲಕ್ಷ ರೂ. ಹಾಗೂ ಇತರೆಡೆಗಳಿಂದ ಮೂರು ಲಕ್ಷ ಕೈ ಸಾಲ ಮಾಡಿಕೊಂಡಿದ್ದರು. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬರದಿಂದ ಬೆಳೆಯೆಲ್ಲ ಒಣಗಿ ನಾಶವಾಗತೊಡಗಿದ್ದು, ಸರ್ಕಾರ ಸಾಲ ಮನ್ನಾ ಮಾಡಬಹುದು ಎಂಬ ಆಲೋಚನೆಯಲ್ಲಿದ್ದರು ಎನ್ನಲಾಗಿದೆ.

ಆದರೆ ಸರ್ಕಾರ ಸಾಲಮನ್ನಾ ಯೋಜನೆಯನ್ನು ಪ್ರಕಟಿಸದ ಹಿನ್ನಲೆಯಲ್ಲಿ ಬೆಳನಷ್ಟ ಹಾಗೂ ಸಾಲದಿಂದ ತೀವ್ರ ಮನನೊಂದ ಕೃಷ್ಣೇಗೌಡ, ತಮ್ಮ ಜಮೀನನಲ್ಲಿ ಕ್ರಿಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ ಹಾಗೂ ಮೂವರು ಪುತ್ರರಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: