ಮೈಸೂರು

ಒಂದೇ ಕಾಮಗಾರಿಗೆ ಎರಡು ಬಿಲ್ ಆರೋಪದ ಹಿನ್ನೆಲೆ : ವಿರೋಧಪಕ್ಷದ ನಾಯಕ ಮಂಜುನಾಥ್ ಗೆ ಲಿಖಿತ ದಾಖಲೆ ಕೇಳಿದ ಪಾಲಿಕೆ

ಮೈಸೂರು,ಫೆ.11:-  ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಒಂದೇ ಕಾಮಗಾರಿಗೆ ಎರಡು ಬಿಲ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಪರಿಶೀಲನೆಗೆ ಸತ್ಯ ಶೋಧನಾ ಸಮಿತಿ ರಚನೆ ಮಾಡಲಾಗಿದೆ.

ಪಾಲಿಕೆ‌ ಕೌನ್ಸಿಲ್ ಸಭಾಂಗಣದಲ್ಲಿಂದು ಸತ್ಯ ಶೋಧನಾ  ಸಮಿತಿ ಸಭೆಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಸತ್ಯ ಶೋಧನಾ ಸಮಿತಿಗೆ ಅಧ್ಯಕ್ಷರಾಗಿ ಮೇಯರ್, ಸದಸ್ಯರಾಗಿ ಉಪಮೇಯರ್ ಇತರೆ ಸದಸ್ಯರು ನೇಮಕಗೊಂಡಿದ್ದಾರೆ.

ಸಭೆಯಲ್ಲಿ ದೊಡ್ಡ ಹಗರಣ ಬಯಲಿಗೆಳೆದಿದ್ದ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜುನಾಥ್ ಭಾಗಿಯಾಗಿದ್ದರು. ಮಂಜುನಾಥ್ ಅವರಿಂದ ಪಾಲಿಕೆ ಲಿಖಿತ ದಾಖಲಾತಿ ಕೇಳಿದೆ.  ಈ ವೇಳೆ ಹಗರಣದ ಹಂತವನ್ನು ಎಳೆಎಳೆಯಾಗಿ  ಬಿ.ವಿ. ಮಂಜುನಾಥ್ ಬಿಡಿಸಿಟ್ಟಿದ್ದಾರೆ.  ನಮಗೆ ಸಂಪುರ್ಣವಾಗಿ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಿ. ನಿಮ್ಮ ಆರೋಪ ಸರಿಯೇ, ಅಧಿಕಾರಿಗಳು ಮಾಡಿರುವುದು ಸರಿಯೇ ಎಂಬುದರ ಸತ್ಯ ತಿಳಿಯಬೇಕಿದೆ. ನೀವು ಹೇಳಿದ್ದನ್ನು ಸಭೆಯಲ್ಲಿ ಚರ್ಚೆ ಮಾಡಬೇಕಿದೆ. ನೀವು ಲಿಖಿತ ದಾಖಲಾತಿಯನ್ನು ನೀಡಿದರೆ ಚರ್ಚೆ ಮಾಡಲು ಸಹಕಾರಿಯಾಗಲಿದೆ. ನೀವು ನೀಡುವ ದಾಖಲಾತಿಗಳ ಮೇಲೆಯೇ ಚರ್ಚೆ ಮಾಡಲಾಗುತ್ತದೆ. ಅದನ್ನು ಬಿಟ್ಟು ಬೇರೆ ಯಾವುದನ್ನು ಚರ್ಚೆ ಮಾಡಲು ಆಗುವುದಿಲ್ಲ ಎಂದು  ಸಭೆಯಲ್ಲಿ ವಿರೋಧ ಪಕ್ಷ ನಾಯಕರಾದ ಮಂಜುನಾಥ್ ಅವರಿಗೆ  ಪಾಲಿಕೆ ಸದಸ್ಯ ಅಯೂಬ್ ಖಾನ್ ಸೂಚಿಸಿದರು.

ಸಭೆಯಲ್ಲಿ ಉಪಮೇಯರ್ ಮತ್ತು ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: