ಮೈಸೂರು

ಫೆ.18 : ‘ಮಧ್ವ-ಪುರಂದರ ನಮನ’ : ನಗರದಲ್ಲಿ ಗಾನಸಿರಿ – ವೇದಾಂತ ಲಹರಿ ಭಾಗ-4

ಮೈಸೂರು, ಫೆ.11:- ನಗರದ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಫೆ.18ರಿಂದ 22ರವರೆಗೆ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯಿಂದ ‘ಮಧ್ವ ಪುರಂದರ ನಮನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಭ ವಿಮರ್ಶೆ, ಗಾಯನ, ಪ್ರವಚನ, ಸಂವಾದ ಹಾಗೂ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.

ಫೆ.18ರಂದು ಸಂಜೆ 6 ಕ್ಕೆ ಉಡುಪಿ ಶ್ರೀ ಅದಮಾರು ಮಠದ ಭಾವಿ ಪರ್ಯಾಯ ಪೀಠಾಧಿಪತಿಗಳಾದ ಪರಮಪೂಜ್ಯ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಭೀಮಸೇತು ಮುನಿವೃಂದ ಮಠದ ಭೀಮನಕಟ್ಟೆ ಪೀಠಾಧಿಪತಿಗಳಾದ ರಘುವರೇಂದ್ರತೀರ್ಥ ಶ್ರೀಪಾದಂಗಳವರು ದಿವ್ಯಸಾನಿಧ್ಯ ವಹಿಸುವರು. ಅಂದು ಸಂಜೆ 6ರಿಂದ 8.30ರವರೆಗೆ ‘ಮಧ್ವವೈಭವ’ ಹನುಮ ಭೀಮ ಮಧ್ವ ಮುನಿಯ ಕುರಿತು ಡಾ.ವಿದ್ವಾನ್ ಬೆ.ನಾ.ವಿಜಯೀಂದ್ರಾಚಾರ್ಯರಿಂದ ವಿಶ್ಲೇಷಣೆ ಹಾಗೂ ಬಾಗಲಕೋಟೆಯ ವಿದ್ವಾನ್ ಜಯತೀರ್ಥ ನಾರಾಯಣ ತಾಸಗಾಂವ್‍ರವರಿಂದ ಸಂಗೀತ ಕಾರ್ಯಕ್ರಮವಿದೆ. ಫೆ.19ರಂದು ಸಂಜೆ 6ರಿಂದ 8.30ರವರೆಗೆ ‘ಪುರಂದರ ವೈಭವ’ ದಾಸರೆಂದರೆ ಪುರಂದರ ದಾಸರಯ್ಯ ಕುರಿತು ಬೆಂಗಳೂರಿನ ವಿದ್ವಾನ್ ಕಲ್ಲಾಪುರ ಪವಮನಾಚಾರ್ಯರಿಂದ ವಿಶ್ಲೇಷಣೆ ಹಾಗೂ ಬೆಂಗಳೂರು ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮರವರಿಂದ ಸಂಗೀತ ಕಾರ್ಯಕ್ರಮವಿದೆ.

ಫೆ.20ರಂದು ಸಂಜೆ 6ರಿಂದ 8.30ರವರೆಗೆ ‘ಕನಕ ವೈಭವ’ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂಬುದರ ಕುರಿತು ಬೆಂಗಳೂರಿನ ವಿದ್ವಾನ್ ಬ್ರಹ್ಮಣ್ಯಾಚಾರ್ಯರವರಿಂದ ವಿಶ್ಲೇಷಣೆ ಹಾಗೂ ಬೆಂಗಳೂರಿನ ಭೂಮಿಕಾ ಮಧುಸೂದನ್‍ರಿಂದ ಗಾಯನವಿದೆ. ಫೆ.21ರಂದು ಸಂಜೆ 6ರಿಂದ 8.30ರವರೆಗೆ ‘ವಿಜಯ ವೈಭವ’ ನಿನ್ನ ಒಲುಮೆಯಿಂದ ಎಂಬುದರ ಕುರಿತು ಬೆಂಗಳೂರಿನ ವಿದ್ವಾನ್ ಕೃಷ್ಣರಾಜ್ ಕುತ್‍ಪಾಡಿಯವರಿಂದ ವಿಶ್ಲೇಷಣೆ ಹಾಗೂ ಯುವ ಗಾಯಕ ಆಶೀಶ್ ನಾಯಕ್ ಮತ್ತು ಕು.ಸುಸ್ಮಿತರಿಂದ ಗಾಯನವಿದೆ. ಫೆ.22ರಂದು ಸಂಜೆ 6ರಿಂದ 8.30ರವರೆಗೆ ‘ದಾಸದ್ವಯ ವೈಭವ’ ಗೋಪಾಲ ದಾಸರು ಹಾಗೂ ಜಗನ್ನಾಥ್ ದಾಸರ ಕುರಿತು ಗುಳೇದಗುಡ್ಡದ ವಿದ್ವಾನ್ ವೆಂಕಟನರಸಿಂಹಾಚಾರ್ಯ, ಧಾರವಾಡರವರಿಂದ ವಿಶ್ಲೇಷಣೆ ಹಾಗೂ ಪುಣೆಯ ವಿದುಷಿ ನಂದಿನಿರಾವ್‍ರಿಂದ ಗಾಯನವಿದೆ.

ಪ್ರತಿದಿನ ಸಂಜೆ 4.30ರಿಂದ 6.00ರವರೆಗೆ ಶುಭಾ ರಾಘವೇಂದ್ರ ಮತ್ತು ಸುಮನಾ ಶ್ರೀಕಾಂತ್‍ರವರ ಸಾರಥ್ಯದಲ್ಲಿ ಮೈಸೂರಿನ ಪ್ರತಿಭಾವಂತ ಗಾಯಕರಿಂದ ದಾಸ ಕುಸುಮಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಎಲ್ಲಾ ದಿನಗಳ ಸಂಗೀತ ಕಛೇರಿಗೆ ಪಕ್ಕವಾದ್ಯದ ಸಹಕಾರವನ್ನು ವಿದ್ವಾನ್ ಗಣೇಶ್ ಭಟ್ ಹಾಗೂ ವೃಂದದವರು ನೀಡಲಿದ್ದಾರೆ ಇದೆಲ್ಲ ಕಾರ್ಯಕ್ರಮಗಳು ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಸಾರಥ್ಯದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಡಾ.ಜಿ.ರವಿ ಹಾಗೂ ಕಾರ್ಯದರ್ಶಿ ಎಸ್.ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: