ಮೈಸೂರು

ರೈತರು ತಂಬಾಕು ಬೆಳೆಯುವ ಬದಲು ಪರ್ಯಾಯ ಬೆಳೆಯನ್ನು ಬೆಳೆಯಲಿ : ವಸಂತ ಕುಮಾರ್ ಮೈಸೂರು ಮಠ

ಮೈಸೂರು,ಫೆ.11:- ಜಿಲ್ಲಾಪಂಚಾಯುತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಸರ್ವೇಕ್ಷಣಾ ಘಟಕ, ಮೈಸೂರು ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶದಡಿ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಂಬಾಕು ಮುಕ್ತ ಮೈಸೂರು ನಗರವನ್ನು ಮಾಡುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ತಂಬಾಕು ಹಂಚಿಕೆದಾರರು ಹಾಗೂ ವ್ಯಾಪಾರಿಗಳಿಗೆ ತರಬೇತಿ ಕಾರ್ಯಾಗಾರವನ್ನಿಂದು ದೇವರಾಜ್ ಅರಸು ರಸ್ತೆಯಲ್ಲಿರುವ ಮೈಸೂರು ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಮಾಜಿಕ ಕಾರ್ಯಕರ್ತ ವಸಂತ ಕುಮಾರ್ ಮೈಸೂರು ಮಠ ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳಲ್ಲಿಯೂ ತಂಬಾಕು ಸೇವನೆ ಜಾಸ್ತಿಯಾಗುತ್ತಿದೆ. ಇದು ಆಘಾತಕಾರಿ ವಿಷಯ. ತಂಬಾಕು ಬೆಳೆ ನಿಯಂತ್ರಣ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇನ್ನೊಂದು ಕಡೆ ಬೆಳೆ ಬೆಳೆಯಲು ಸಬ್ಸಿಡಿಯನ್ನೂ ನೀಡುತ್ತಿದೆ. ಮಗುವನ್ನು ಚಿವುಟಿ, ಲಾಲಿ ಹಾಡುವ ಕಾರ್ಯಕ್ರಮವನ್ನು ಸರ್ಕಾರ ಮಾಡಬಾರದು ಎಂದರು. ಸ್ವಸ್ಥ ಸಮಾಜ ಬೇಕು. ತಂಬಾಕು ಜೀವನ ಹಾಳು ಮಾಡುವ ಬೆಳೆ. ರೈತರು ಇದನ್ನು ಬೆಳೆಯೋದನ್ನು ಕಡಿಮೆ ಮಾಡಿ. 2020ರ ವೇಳೆಗೆ ಒಂದು ವರ್ಷಕ್ಕೆ 8ಲಕ್ಷ ಜನರು ತಂಬಾಕು ಸೇವನೆಯಿಂದ ಬರುವ ರೋಗಗಳಿಂದ ಸಾಯಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ಜನರ ಆರೋಗ್ಯಕ್ಕಾಗಿ ಎಷ್ಟೊಂದು ಯೋಜನೆಯನ್ನು ಜಾರಿಗೆ ತಂದಿದೆ. ಅದು ನಿಜವಾಗಿಯೂ ರೈತರನ್ನು, ಜನರನ್ನು ತಲುಪುತ್ತಿದೆಯಾ? ಎಂದು ಪ್ರಶ್ನಿಸಿದರು. ರೈತರು ತಂಬಾಕು ಬೆಳೆಯುವ ಬದಲು ಪರ್ಯಾಯ ಬೆಳೆಯನ್ನು ಬೆಳೆಯಲಿ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭ ಟೊಬ್ಯಾಕೊ ಕನ್ಸಲ್ ಟೆಂಟ್ ಡಿಸ್ಟ್ರಿಕ್ಟ್ ಅಸಿಸ್ಟೆಂಟ್ ಶಿವಕುಮಾರ್, ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್ ನ ಅಧ್ಯಕ್ಷ ಎ.ಎಸ್.ಸತೀಶ್, ಪ್ರೊಗ್ರಾಮ್ ಮ್ಯಾನೇಜರ್ ಜಿತಿನ್ ಚಂದ್ರನ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: