ದೇಶಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೌಂದರ್ಯ ರಜನಿಕಾಂತ್

ಚೆನ್ನೈ,ಫೆ.11-ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಅವರ ಮದುವೆ ಸೋಮವಾರ ಅದ್ಧೂರಿಯಾಗಿ ನೆರವೇರಿತು.

ನಟ ಹಾಗೂ ಉದ್ಯಮಿ ವಿಶಾಕನ್ ವಾನಂಗಮುಡಿಯೊಂದಿಗೆ ಸೌಂದರ್ಯ ರಜನಿಕಾಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚೆನ್ನೈನ ಎಂಆರ್ಸಿ ನಗರ್ನಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ವಿವಾಹ ಜರುಗಿತು.

ಶುಕ್ರವಾರ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಚೆನ್ನೈ ನಿವಾಸದಲ್ಲಿ ಪ್ರೀ ವೆಡ್ಡಿಂಗ್ ರೆಸೆಪ್ಷನ್ ಅದ್ದೂರಿಯಾಗಿ ನಡೆದಿತ್ತು. ಕುಟುಂಬಿಕರು, ಬಂಧುಮಿತ್ರರನ್ನು ಮಾತ್ರ ಆರತಕ್ಷತೆ ಕಾರ್ಯುಕ್ರಮಕ್ಕೆ ಆಹ್ವಾನಿಸಲಾಗಿತ್ತು.

ಸೌಂದರ್ಯ, ವಿಶಾಖನ್ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು. ಕೇವಲ ಕುಟುಂಬಿಕರು, ಆತ್ಮೀಯರನ್ನು ಮಾತ್ರ ನಿಶ್ಚಿತಾರ್ಥಕ್ಕೆ ಆಹ್ವಾನಿಸಲಾಗಿತ್ತು. ಇಂದು ವಿವಾಹ ನಡೆದಿದ್ದು, ವಿವಾಹಕ್ಕೆ ಸಿನಿಮಾ ಕ್ಷೇತ್ರದ ಗಣ್ಯರು, ರಾಜಕೀಯ ಗಣ್ಯರು ಸಾಕ್ಷಿಯಾದರು.

ಕಮಲ್ ಹಾಸನ್, ಅನಿರುಧ್ ರವಿಚಂದರ್, ಧನುಷ್, ರಾಘವ ಲಾರೆನ್ಸ್, ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಅವರ ಸಂಪುಟ ಸಚಿವರು ಪಾಲ್ಗೊಂಡು ನೂತನ ವಧುವರರನ್ನು ಹರಸಿದರು.

ಸೌಂದರ್ಯ ರಜನಿಕಾಂತ್ ಅವರಂತೆಯೇ ವಿಶಾಖನ್ಗೂ ಇದು ಎರಡನೇ ಮದುವೆ. ಮ್ಯಾಗಜಿನ್ ಒಂದರ ಸಂಪಾದಕಿ ಕನಿಖಾ ಕುಮಾರನ್ ಅವರನ್ನು ಮಿಶಾಖನ್ ಮದುವೆಯಾಗಿ ಬಳಿಕ ವಿಚ್ಛೇದನ ಪಡೆದಿದ್ದಾರೆ. ಇನ್ನು ಸೌಂದರ್ಯ ಸಹ ಅಷ್ಟೇ ಉದ್ಯಮಿ ಅಶ್ವಿನ್ರನ್ನು ವರಿಸಿದ್ದರು. ಬಳಿಕ ಭಿನ್ನಾಭಿಪ್ರಾಯಗಳ ಕಾರಣ 2017ರಲ್ಲಿ ಇವರಿಬ್ಬರೂ ದೂರವಾದರು. ಇವರಿಗೆ ಮೂರು ವರ್ಷದ ವೇದ್ ಕೃಷ್ಣ ಹೆಸರಿನ ಮಗ ಇದ್ದಾನೆ. (ಎಂ.ಎನ್)

Leave a Reply

comments

Related Articles

error: