ಪ್ರಮುಖ ಸುದ್ದಿ

ದಿನದ 24 ಗಂಟೆಗಳ ಕಾಲ ಸುದ್ದಿಯ ಜಂಜಾಟದಲ್ಲೇ ಇರುವ ಪತ್ರಕರ್ತರಿಗೆ ಕ್ರೀಡಾಕೂಟಗಳು ಅತ್ಯವಶ್ಯಕ : ವಿ ಪಿ ಶಶಿಧರ್

ರಾಜ್ಯ(ಮಡಿಕೇರಿ) ಫೆ 11 : – ಕುಶಾಲನಗರ ಪ್ರೆಸ್ ಕ್ಲಬ್ ವತಿಯಿಂದ ಪತ್ರಕರ್ತರು ಹಾಗೂ ವಿದ್ಯಾರ್ಥಿಗಳಿಗಾಗಿ ಶಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಜೆಮ್ಸ್ ಸ್ಮಾಶ್, ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ವಿ ಪಿ ಶಶಿಧರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸಮಾಜವನ್ನು ಎಚ್ಚರಿಸುವ ತಿದ್ದುವ ಮಹತ್ತರ ಕಾರ್ಯ ಪತ್ರಕರ್ತರದ್ದಾಗಿದೆ. ಆ ನಿಟ್ಟಿನಲ್ಲಿ ಕುಶಾಲನಗರದ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ಸುದ್ದಿಯ ಜಂಜಾಟದಲ್ಲೇ ಇರುವ ಪತ್ರಕರ್ತರಿಗೆ ಕೊಂಚ ಬಿಡುವು ನೀಡುವ ಹಾಗೂ ಮನರಂಜನೆ ನೀಡುವ ಉದ್ದೇಶದಿಂದ ಇಂತಹ ಕ್ರೀಡಾಕೂಟಗಳು  ಅತ್ಯವಶ್ಯಕ ಎಂದರು.

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸೋಮೇಗೌಡ ಮಾತನಾಡಿ, ಪತ್ರಕರ್ತರ ಕಾರ್ಯ ಮಹತ್ತರವಾದುದು. ಈ ಪ್ರಪಂಚದಲ್ಲಿ ನಡೆದಿರುವ ಎಲ್ಲಾ ಮಹಾಕ್ರಾಂತಿಗಳ ಹಿಂದೆ ಪತ್ರಕರ್ತರ ಪಾತ್ರವಿದೆ. ಸಮಾಜದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಕಾರ್ಯ ಪತ್ರಕರ್ತರು ಮಾಡುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಕ್ರೀಡೆಯಿಂದ ದೈಹಿಕ ಸಧೃಡತೆ ಕಾಯ್ದುಕೊಳ್ಳುವುದು ಸಾಧ್ಯ ಅಷ್ಟೇ ಅಲ್ಲ, ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು . ಗೆಲುವು ಸೋಲನ್ನು ಸಮಾನವಾಗಿ ಸ್ವೀಕರಿಸುವಂತೆ ಸಲಹೆ ನೀಡಿದರು.

ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಪ್ರಭುದೇವ್ ಮಾತನಾಡಿ, ಪತ್ರಕರ್ತರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ನೋವುಂಡವರ, ಧಮನಿತರ ಸಹಾಯಕ್ಕೆ, ಅವರಿಗೆ ನ್ಯಾಯ ಒದಗಿಸಲು ಮುಂದಾಗಬೇಕು. ಸದಾ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು  ಎಂದು ಸಲಹೆ ನೀಡಿದರು.  ಡಯಟ್ ನ ಹಿರಿಯ ಉಪನ್ಯಾಸಕ ಕೆ .ವಿ ಸುರೇಶ್ ಮಾತನಾಡಿ, ಕ್ರೀಡೆ ಅನಾದಿಕಾಲದಿಂದಲೂ ನಮ್ಮಲ್ಲಿ ಹಾಸು ಹೊಕ್ಕಾಗಿದೆ. ಕ್ರೀಡೆಯಲ್ಲಿ ಸಮಾನತೆಯನ್ನ ಕಾಣಬಹುದಾಗಿದೆ. ಅಲ್ಲಿ ಅಲ್ಲಿ ಸೌಹಾರ್ದತೆ , ಸಾಮರಸ್ಯ ಕಾಣಬಹುದು. ಆ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಡ ಆಯೋಜನೆ  ಉತ್ತಮ ಕಾರ್ಯ ಎಂದರು.

ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ, ಪ್ರೆಸ್ ಕ್ಲಬ್ ಅಧ್ಯಕ್ಷ ಹೆಚ್ ಎಂ ರಘು, ಪತ್ರಕರ್ತರ ಹಿತದೃಷ್ಟಿಯಿಂದ ಪ್ರೆಸ್ ಕ್ಲಬ್ ಸ್ಥಾಪನೆಯಾಯಿತು. ಅಂತೆಯೇ ಪತ್ರಕರ್ತರಲ್ಲಿ ಕ್ರೀಡಾ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಕಳಕಳಿ ಹೊಂದಿರುವ ಪ್ರೆಸ್ ಕ್ಲಬ್ ಸಾಮಾಜಿಕ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸುವ ಆ ಮೂಲಕ ಮತ್ತಷ್ಟು ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು

ವಕೀಲರ ಸಂಘದ ಅಧ್ಯಕಗಷ ಆರ್ ಕೆ ನಾಗೇಂದ್ರ ಬಾಬು ಮಾತನಾಡಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪತ್ರಕರ್ತರು ,ತಮ್ಮ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕ. ಅದರಂತೆ ಇಂದು ಹಮ್ಮಿಕೊಂಡಿರುವ ಕ್ರೀಡಾಕೂಟ ಮಹತ್ವದ್ದು ಎಂದರು. ಸತ್ಯ ಪರಿಶೋಧನೆ ಮಾಡಿ ವರದಿ ಮಾಡಿ ಎಂದು ಕಿವಿಮಾತು ಹೇಳಿದರು.

ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ .ಮಹಾದೇವ್ ಮಾತನಾಡಿ, ಇಂದು ಹಲವು ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ಅಂತಹ ಪತ್ರಕರ್ತರ ಸಹಾಯಕ್ಕೆ ಧಾವಿಸಲು ಸದಾ ಸಿದ್ಧ. ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದರು.

ಕ್ರೀಡಾ ಕೂಟ  ಆಯೋಜನೆ ಆಶಾದಾಯಕ. ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸಿ ಕ್ರೀಡಾಕೂಟದಲ್ಲಿ ಪಾಲ್ಗೊಳುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: