
ಮೈಸೂರು
ಮದ್ಯದಂಗಡಿಗೆ ರಹದಾರಿ ಕೊಟ್ಟಿರುವುದನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು,ಫೆ.11:- ನಂಜನಗೂಡು ತಾಲೂಕು ಹುಣಸನಾಳು ಗ್ರಾಮದಲ್ಲಿ ಮದ್ಯದಂಗಡಿಗೆ ರಹದಾರಿ ಕೊಟ್ಟಿರುವುದನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಯ ಕಛೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಹುಣಸನಾಳು ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ರಹದಾರಿ ನೀಡಿರುವುದನ್ನು ರದ್ದುಪಡಿಸುವಂತೆ ಗ್ರಾಮಸ್ಥರು ಸುಮಾರು ಮೂರುತಿಂಗಳಿನಿಂದ ಹಂತಹಂತವಾಗಿ ತಾಲೂಕು ಮತ್ತು ಜಿಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ರಹದಾರಿಯನ್ನು ರದ್ದುಪಡಿಸದೇ ಇದ್ದಾರೆ. ಇನ್ನಾದರೂ ರಹದಾರಿಯನ್ನು ರದ್ದುಪಡಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಡಗಲಪುರ ನಾಗೇಂದ್ರ, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನಂಜುಂಡಸ್ವಾಮಿ, ಶಿರಮಳ್ಳಿ ಸಿದ್ದಪ್ಪ, ಸಿದ್ದಶೆಟ್ಟರು, ಯಜಮಾನ್ ಸಿದ್ದರಾಜು, ಎಂ.ಸಿದ್ದರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)