ಮೈಸೂರು

ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ

ಮೈಸೂರು,ಫೆ.11:- ಕೆಎಎಸ್ ಅಧಿಕಾರಿಗಳಾದ ಮೈಸೂರು ತಾಲೂಕು ತಹಶೀಲ್ದಾರ್ ರಮೇಶ್ ಬಾಬು ಮತ್ತು ಅದೇ ಸ್ಥಾನಕ್ಕೆ ವರ್ಗವಾಗಿರುವ ರೇಣುಕುಮಾರ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೈಸೂರು ನಾಯಕರ ಪಡೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

ತಹಶಿಲ್ದಾರ್ ರಮೇಶ್ ಬಾಬು ಮತ್ತು ಅದೇ ಸ್ಥಾನಕ್ಕೆ ವರ್ಗವಾಗಿರುವ ರೇಣುಕುಮಾರ್ ಜಾತಿ ಮತ್ತು ಭ್ರಷ್ಟಾಚಾರಗಳ ಕುರಿತು ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ತಲೆತಗ್ಗಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಇವರು ಆಡಿರುವ ಮಾತುಗಳು ಮೈಸೂರು ತಾಲೂಕು ಕಛೇರಿ ಯಾವ ರೀತಿಯಲ್ಲಿ ಲಂಚದ ಕೇಂದ್ರವಾಗಿದೆ ಎಂಬುದನ್ನು ತಿಳಿಸುತ್ತದೆ. ಇವರ ಅವಧಿಯಲ್ಲಿ ಮೈಸೂರು ತಾಲೂಕು ಕಛೇರಿಯಲ್ಲಿ ನಡೆದ ಕಂದಾಯ ಜಮೀನು, ಖರಾಬು, ಬಿ ಖರಾಬು ಖಾತೆ ಇವುಗಳ ಕಡತಗಳನ್ನು ಪರಿಶೀಲಿಸಿ ನಿಜಾಂಶ ಅರಿಯಬೇಕು. ಇವರ ವಿರುದ್ಧ ಎಸ್ ಸಿ/ಎಸ್ ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಸಾಮಾಜಿಕ ಕಾರ್ಯಕರ್ತ, ವಕೀಲ ಪಡುವಾರಹಳ್ಳಿ ರಾಮಕೃಷ್ಣ ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: