ಮೈಸೂರು

ಇಬ್ಬರು ದರೋಡೆಕೋರರ ಬಂಧನ : 1,50,000 ರೂ. ನಗದು ವಶ

ಮೈಸೂರು,ಫೆ.11:-  ವಿಜಯನಗರದ ರಾಜು ಎಂಬವರು 14.11.2018ರಂದು ಶಿವರಾಂಪೇಟೆ ವಿನೋಭ ರಸ್ತೆಯಲ್ಲಿರುವ ಕರೂರು ವೈಶ್ಯಾ ಬ್ಯಾಂಕಿನಿಂದ 02 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ತಮ್ಮ ಕಾರಿನ ಬಳಿ ಹೋಗಲು ರಸ್ತೆ ದಾಟುವಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು  ರಾಜು ಅವರಿಂದ ಹಣವಿದ್ದ ಬ್ಯಾಗನ್ನು ಕಿತ್ತುಕೊಂಡು ಹೋದ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ದೇವರಾಜ ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ರಾಜೇಶ @ ಪಂದಿಪಾಟಿ ರಾಜೇಶ ಬಿನ್ ಲೇಟ್ ಪಂದಿಪಾಟಿ ಗುಣಶೇಖರ್,( 28 ), ಓ.ಜಿ ಕುಪ್ಪಂ ಗ್ರಾಮ, ಚಿತ್ತೂರು ಜಿಲ್ಲೆ, ಆಂಧ್ರ ಪ್ರದೇಶ, ಷಣ್ಮುಗಂ ಬಿನ್ ಲೇಟ್ ರಾಮಯ್ಯ, (52), ಓ.ಜಿ ಕುಪ್ಪಂ ಗ್ರಾಮ, ಚಿತ್ತೂರು ಜಿಲ್ಲೆ, ಆಂಧ್ರ ಪ್ರದೇಶ ಎಂದು ಗುರುತಿಸಲಾಗಿದೆ. ಇವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ತಾವು ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದು, ಆರೋಪಿಗಳಿಂದ 1,50,00ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇವರ ಜೊತೆ ಇನ್ನೂ 04 ಜನ ಆರೋಪಿಗಳು ಸೇರಿಕೊಂಡು, ಬ್ಯಾಂಕ್‍ಗಳಲ್ಲಿ ಹೆಚ್ಚು ಹಣ ಡ್ರಾ ಮಾಡುವವರನ್ನು ಗಮನಿಸಿಕೊಂಡು  ಈ ರೀತಿಯ ಕೃತ್ಯವನ್ನು ಎಸಗುತ್ತಿದ್ದರು.  ಉಳಿದ 04 ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

ಈ ಪ್ರಕರಣದ ಪತ್ತೆ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಂ ಅಮಟೆ  ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ.  ಜಿ ಎಸ್ ಗಜೇಂದ್ರಪ್ರಸಾದ್‍  ನೇತೃತ್ವದಲ್ಲಿ  ದೇವರಾಜ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಸನ್ನಕುಮಾರ್, ಪಿ.ಎಸ್.ಐ  ಎಸ್ ರಾಜು, ಎ.ಎಸ್.ಐ  ಉದಯಕುಮಾರ್ ಮತ್ತು ಸಿಬ್ಬಂದಿಯವರಾದ ಸೋಮಶೆಟ್ಟಿ, ಸುರೇಶ್, ವೇಣುಗೋಪಾಲ್, ಮಂಜುನಾಥ್, ಉಮೇಶ್, ನಂದೀಶ್ ಮಾಡಿರುತ್ತಾರೆ. (ಎಸ್.ಎಚ್)

Leave a Reply

comments

Related Articles

error: