ಕ್ರೀಡೆ

ಐಪಿಎಲ್: ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ ರಾಜಸ್ಥಾನ ರಾಯಲ್ಸ್

ಜೈಪುರ,ಫೆ.11-ಐಪಿಎಲ್ ಫ್ರಾಂಚೈಸಿಯಾದ ರಾಜಸ್ಥಾನ ರಾಯಲ್ಸ್ 12ನೇ ಆವೃತ್ತಿಯಲ್ಲಿ ಹೊಸ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.

ರಾಜಸ್ಥಾನ ‘ಪಿಂಕ್’ ಬಣ್ಣಕ್ಕೆ ಹೆಸರಾಗಿದೆ. ಇದೀಗ ರಾಜಸ್ಥಾನ ರಾಯಲ್ಸ್ ಕೂಡ ತನ್ನ ತಂಡದ ಜೆರ್ಸಿಯನ್ನು ಬದಲಿಸಿದ್ದು 12ನೇ ಆವೃತ್ತಿಯಲ್ಲಿ ನೀಲಿ ಬಣ್ಣದ ಬದಲಿಗೆ ‘ಪಿಂಕ್’ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.

ರಾಯಲ್ಸ್, ‘ಕ್ಯಾನ್ಸರ್’ ಜಾಗೃತಿಗಾಗಿ ಕಳೆದ ಆವೃತ್ತಿಯ ಕೊನೆ ಪಂದ್ಯದಲ್ಲಿ ‘ಪಿಂಕ್ ಜೆರ್ಸಿ’ ಧರಿಸಿತ್ತು. ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 23ರಿಂದ ಆರಂಭವಾಗುವ ಸಾಧ್ಯತೆಯಿದೆ.

ಶೇನ್ ವಾರ್ನ್ ರಾಯಭಾರಿ: ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ 12ನೇ ಆವೃತ್ತಿಯಲ್ಲಿ ರಾಜಸ್ಥಾನ ತಂಡದ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ. 2008ರಲ್ಲಿ ವಾರ್ನ್ ರಾಜಸ್ಥಾನ ತಂಡದ ನಾಯಕರಾಗಿದ್ದ ಅವರು ತಂಡವನ್ನು ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಬಳಿಕ ಸಲಹೆಗಾರರಾಗಿದ್ದರು. (ಎಂ.ಎನ್)

Leave a Reply

comments

Related Articles

error: