ಕರ್ನಾಟಕಪ್ರಮುಖ ಸುದ್ದಿ

ಆಪರೇಷನ್ ಕಮಲ ಆಡಿಯೋ ಕ್ಲಿಪ್: ಎಸ್‍ಐಟಿ ತನಿಖೆಗೆ ಸ್ಪೀಕರ್ ಸೂಚನೆ

ಬೆಂಗಳೂರು (ಫೆ.11): ಬಿಜೆಪಿಯ ಆಪರೇಷನ್ ಕಮಲ ಆಡಿಯೋ ಕ್ಲಿಪ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಫೆಬ್ರವರಿ 8 ರಂದು ರಿಲೀಸ್​ ಮಾಡಿದ್ದ ಆಡಿಯೋ ಕುರಿತು ಇಂದು ಸೋಮವಾರ ವಿಧಾನಸಭಾ ಕಲಾಪದಲ್ಲಿ ಬಾರೀ ಚರ್ಚೆ-ಕೋಲಾಹಲಕ್ಕೆ ಕಾರಣವಾಯಿತು.

ಈ ಆಪರೇಷನ್​ ಆಡಿಯೋ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸುವಂತೆ ಸ್ಪೀಕರ್ ರಮೇಶ್​ ಕುಮಾರ್​, ಸಿಎಂ ಕುಮಾರಸ್ವಾಮಿಗೆ ಸೂಚನೆ ನೀಡಿದ್ದಾರೆ. ಸ್ಪೀಕರ್ ರಮೇಶ್​ ಕುಮಾರ್ ಆರಂಭದಲ್ಲಿ ತಾವೇ, ಆಡಿಯೋ ಬಗ್ಗೆ ಪ್ರಸ್ತಾಪ ಮಾಡಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ಸುದೀರ್ಘ ಚರ್ಚೆ ಬಳಿಕ, ಸ್ಪೀಕರ್​ ರಮೇಶ್​ ಕುಮಾರ್, ಆಡಿಯೋ ಸಂಬಂಧ ಸೂಕ್ತ ತನಿಖೆ ಆಗುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ನಾನು ಸಿಎಂಗೆ ಸೂಚನೆ ನೀಡುತ್ತೇನೆ. ವಿಶೇಷ ತಂಡ ರಚಿಸಿ 15 ದಿನದೊಳಗೆ ವರದಿ ನೀಡಿ. ಆಡಿಯೋದಲ್ಲಿ ನನ್ನ ಹೆಸರ ಕೂಡ ಕೇಳಿ ಬಂದಿದೆ. ನನಗೆ ರಿಲೀಫ್​ ಕೊಡಿ. ಸಮಗ್ರ ತನಿಖೆ ನಡೆಸಿ ಆಡಿಯೋದಲ್ಲಿ ಯಾರು ಇದ್ದಾರೆ ಅನ್ನೋದರ ಬಗ್ಗೆ ತನಿಖೆ ಆಗಲಿ ಎಂದು ಸೂಚನೆ ನೀಡಿದರು.

ಸರ್ಕಾರದ ಮೇಲೆ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಹಾಗೂ ಈ ಆಡಿಯೋ ಕ್ಲಿಪ್ ಪ್ರಕರಣವನ್ನು ನ್ಯಾಯಾಂಗದ ಮೂಲಕ ತನಿಖೆಯಾಗಬೇಕು ಎಂದು ವಿಧಾನಸೌಧದಲ್ಲಿ ಬಿಜೆಪಿ ಆಗ್ರಹಿಸಿತು.

ಇದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರತಿಕ್ರಿಯಿಸಿ, ಮತ್ತೆ ನನ್ನ ನಿರ್ಧಾರ ಬದಲಿಸುವುದಿಲ್ಲ. 15 ದಿನದಲ್ಲಿ ನನಗೆ ರಿಲೀಫ್ ಸಿಗದಿದ್ರೆ ಕಷ್ಟ ಅದಕ್ಕಾಗಿ ಎಸ್‌ಐಟಿ ತನಿಖೆಗೆ ಆದೇಶಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ನಂತರ ಸದನವನ್ನು ನಾಳೆಗೆ ಮುಂದೂಡಲಾಯಿತು. (ಎನ್.ಬಿ)

Leave a Reply

comments

Related Articles

error: