ಮೈಸೂರು

ಕಲಾರಸದೌತಣ ನೀಡಿದ ಬಹುರೂಪಿ

ಸಂಜೆಯಾ ರಾಗಕೆ ಬಾನು ಕೆಂಪೇರಿದೆ…ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ ಈಗ ರಂಗೇರಿದೆ ಎನ್ನುವ ಹಾಡಿನ ಸಾಲುಗಳನ್ನು ಅರ್ಥಪೂರ್ಣಗೊಳಿಸುತ್ತಿರುವುದು ಮೈಸೂರಿನ ರಂಗಾಯಣ. ಅಲ್ಲಿ ನಡೆಯುತ್ತಿರುವ ಬಹುರೂಪಿ ಅಂತಾರಾಷ್ಟ್ರೀಯ ನಾಟಕೋತ್ಸವ ಜನಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಅತ್ತ ಸೂರ್ಯ ಮರೆಗೆ ಜಾರುತ್ತಿದ್ದಂತೆ, ರಂಗಾಯಣದಲ್ಲಿ ಬಣ್ಣಬಣ್ಣದ ದೀಪಗಳು ಜಗಮಗಿಸಿ ಕಲಾಸಕ್ತರಿಗೆ ವಿವಿಧ ರೀತಿಯ ಕಲಾರಸದೌತಣಗಳನ್ನು ನೀಡಲು ಸಿದ್ಧಗೊಳ್ಳುತ್ತವೆ. ಅದು ಒಂದಕ್ಕಿಂತ ಒಂದು ಅದ್ಭುತ. ರಂಗಸಂಗೀತದಲ್ಲಿ ಭೂಪಾಲ್ ನ ರಾಜೇಶ್ ಖಡೋರಿಯಾ ಮತ್ತು ತಂಡ ರವಿಂದ್ರನಾಥ ಠಾಗೋರ್ ಅವರ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು.

ರಾಜಸ್ಥಾನದ ಬುಡಕಟ್ಟು ಜಾನಪದ ಚಕ್ರಿ ನೃತ್ಯವನ್ನು ವನ್ನು ಸಾದರಪಡಿಸಿದ ಕಲಾವಿದರು ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾದರು.

1930ರ ದಶಕದಲ್ಲಿ ಬುಡಕಟ್ಟಿನ ಜನಾಂಗವೊಂದು ಲೇವಾದೇವಿ ವ್ಯವಹಾರದ ಸುಳಿಗೆ ಸಿಲುಕಿ ಶೋಷಣೆಗೊಳಗಾದ ಸ್ಥಿತಿಯನ್ನು ಪರಿಚಯಿಸುವ ಒರಿಸ್ಸಾದ ಅಭಿಜಾತ ನಾಟಕ ಘಿನುವಾ ನೋಡುಗರ ಕಣ್ಣಂಚನ್ನು ತೇವಗೊಳಿಸಿತು.

 

Leave a Reply

comments

Related Articles

error: