ಮೈಸೂರು

ವರ್ತಕರ ಸಂಘದ ಚುನಾವಣೆ : ಪ್ರಕಾಶ್ ಗೆ ಜಯ

ಮೈಸೂರು ತಾಲೂಕು ವರ್ತಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪ್ರಕಾಶ್ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ.

ವರ್ತಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪ್ರಕಾಶ್ ತನ್ನ ಪ್ರತಿ ಸ್ಪರ್ಧಿ ಬಾಲಚಂದ್ರ ವಿರುದ್ಧ 38 ಮತಗಳ  ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪ್ರಕಾಶ್ ಅವರಿಗೆ ಒಟ್ಟು 559 ಮತಗಳು ಲಭಿಸಿದ್ದು,  ಪ್ರತಿಸ್ಪರ್ಧಿ ಬಾಲಚಂದ್ರ ಅವರಿಗೆ 521 ಮತಗಳು ಚಲಾವಣೆಯಾಗಿದ್ದವು.  ಫಲಿತಾಂಶ ಹೊರಬೀಳುತ್ತಿದ್ದಂತೆ ಅವರ ಅಭಿಮಾನಿಗಳು, ಬೆಂಬಲಿಗರು ಸಿಹಿಹಂಚಿ, ಪ್ರಕಾಶ್ ಅವರಿಗೆ ಹೂವಿನ ಹಾರ ಹಾಕಿ ಸಂಭ್ರಮಿಸಿದರು.

Leave a Reply

comments

Related Articles

error: