ಮೈಸೂರು

ಮೂರು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಮತ್ತೆ ಮರುಜೀವ

ಮೈಸೂರು,ಫೆ.12:-  ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣದ ಭೈರಾಪುರ ಬಡಾವಣೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಚೈತ್ರಾಳ ಅನುಮಾನಾಸ್ಪದ ಸಾವು ಪ್ರಕರಣ ಮತ್ತೆ ಮರು ಜೀವ ಪಡೆದಿದೆ.

ಮರಣೋತ್ತರ ಪರೀಕ್ಷೆಗೆ  ಪೊಲೀಸ್ ಇಲಾಖೆ ಮುಂದಾಗಿದ್ದು, ಟಿ.ನರಸೀಪುರ ತಹಶೀಲ್ದಾರ್ ನಾಗಪ್ರಶಾಂತ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ನಂಜನಗೂಡು ಡಿವೈಎಸ್ಪಿ ಮಲ್ಲಿಕ್ ಕೂಡ ಸ್ಥಳದಲ್ಲಿ ಹಾಜರಿದ್ದರು. ಮೂರು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಚೈತ್ರ ಸಾವನ್ನಪ್ಪಿದ್ದರು. ವರದಕ್ಷಿಣೆ ವಿಷಯಕ್ಕೆ ಕೊಲೆ ಮಾಡಿರುವುದಾಗಿ ಮೃತಳ ತಾಯಿ ಆರೋಪಿಸಿದ್ದಾರೆ. 2014 ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನ  ಸುನೀಲ್ ಕುಮಾರ್ ಎಂಬಾತನಿಗೆ ಚೈತ್ರಳನ್ನು ವಿವಾಹ ಮಾಡಿಕೊಡಲಾಗಿತ್ತು. ಚೈತ್ರಳ ಗಂಡ ಸುನಿಲ್ ಕೊಲೆ ಮಾಡಿರುವುದಾಗಿ ಚೈತ್ರಾಳ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: