ಮೈಸೂರು

ಮೈಸೂರು ವಿವಿ ಕುಲಪತಿ ಹುದ್ದೆ : 150ಕ್ಕೂ ಅಧಿಕ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ನಿವೃತ್ತಿಯ ನಂತರ ತೆರವಾದ ಸ್ಥಾನ ತುಂಬಲು ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

ಈಗಾಗಲೇ 150ಕ್ಕೂ ಅಧಿಕ ಆರ್ಹ ಆಕಾಂಕ್ಷಿಗಳಿಂದ ಅರ್ಜಿಗಳು ಬಂದಿದ್ದು, ಬಹುತೇಕರು ಮೈಸೂರು ಮತ್ತು ಬೆಂಗಳೂರು ಎರಡು ವಿವಿಗಳಿಗೂ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿಯೂ ಮೈಸೂರು ವಿವಿಗೆ ಹೆಚ್ಚಿನ ಅರ್ಜಿಗಳು ಬಂದಿವೆ. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಜ.10ರಂದು ನಿವೃತ್ತರಾಗಿದ್ದರು.

ಮೈಸೂರು ವಿವಿಯ ಕುಲಪತಿ ಸ್ಥಾನಕ್ಕೆ ಮೂವರು ಗಣ್ಯರ ಹೆಸರನ್ನು ಶಿಫಾರಸ್ಸನ್ನು ವಿಟಿಯು ವಿಶ್ರಾಂತ ಕುಲಪತಿ ಡಾ.ಎಚ್.ಪಿ.ಖಿಂಚಾ ಅಧ್ಯಕ್ಷತೆಯಲ್ಲಿ ರಚಿತವಾದ ಶೋಧನಾ ಸಮಿತಿ ಶಿಫಾರಸ್ಸು ಮಾಡಿ ಆದೇಶ ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಶೋಧನಾ ಸಮಿತಿಗೆ ಸರ್ಕಾರದ ಪ್ರತಿನಿಧಿಯಾಗಿ ಗುಲ್ಬರ್ಗ ವಿವಿಯ ಕುಲಪತಿ ಡಾ.ಎಸ್.ಆರ್.ನಿರಂಜನ್, ಸಿಂಡಿಕೇಟ್ ಸದಸ್ಯ ಡಾ.ಎಸ್.ರಮಾನಂದಶೆಟ್ಟಿ ಮತ್ತು ಯುಜಿಸಿ ಪ್ರತಿನಿಧಿಯಾಗಿ ಪ್ರೊ.ಆರ್.ಸಿ.ಕುಹಾದ್ ಅವರ ಹೆಸರುಗಳು ಅಂತಿಮಗೊಂಡಿವೆ.

ಕುಲಪತಿ ಸ್ಥಾನಕ್ಕೆ ಮೈಸೂರು ವಿವಿಯಿಂದಲೇ 15ಕ್ಕೂ ಹೆಚ್ಚು ಅರ್ಜಿಗಳನ್ನು ನೋಂದಾಯಿಸಲಾಗಿದ್ದು ಅವರಲ್ಲಿ ಪ್ರೊ.ಸಿ.ಪಿ.ಸಿದ್ಧಾಶ್ರಮ, ವೈಚಾರಿಕ ಚಿಂತಕ ಪ್ರೊ.ಅರವಿಂದ ಮಾಲಗತ್ತಿ, ಡಾ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಸಿ.ಬಸವರಾಜು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಡಾ.ವಿ.ರವಿಶಂಕರ್ ರೈ, ಡಾ.ಬಿ.ಎಸ್.ಸುರೇಶ್, ಡಾ.ಜಿ.ಕೊಟ್ರೇಶ್ವರ್, ಪ್ರೊ.ಬ.ಸ.ಸುಂದರಯ್ಯ ಮುಂಚೂಣಿಯಲ್ಲಿದ್ದಾರೆ. ಹಂಪಿ ಕನ್ನಡ ವಿವಿಯ ಕುಲಪತಿ ಡಾ.ಮಲ್ಲಿಕಾಘಂಟಿಯೂ ಅತಿ ಉತ್ಸುಕರಾಗಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದಿದೆ.

Leave a Reply

comments

Related Articles

error: