ಪ್ರಮುಖ ಸುದ್ದಿ

ಮಡಿಕೇರಿಯಲ್ಲಿ ರಥಸಪ್ತಮಿ ಯೋಗ : ವಿದ್ಯಾರ್ಥಿಗಳಿಂದ 108 ಸೂರ್ಯ ನಮಸ್ಕಾರ

ರಾಜ್ಯ(ಮಡಿಕೇರಿ) ಫೆ.12 : – ಸೂರ್ಯನು ಏಳು ಕುದುರೆ ಇರುವ ರಥವನ್ನೇರಿ ಸಿಂಹ ರಾಶಿಯಿಂದ ಮಕರ ರಾಶಿಗೆ ಸಾಗುವ ಕಾಲವೇ ರಥಸಪ್ತಮಿ. ಇದು ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗುವ ಮುನ್ಸೂಚನೆಯಾಗಿದ್ದು, ಈ ವಿಶೇಷ ಸಂದರ್ಭದಲ್ಲಿ ಮಂಜಿನ ನಗರಿ ಮಡಿಕೇರಿಯಲ್ಲಿ ನೂರಾರು ವಿದ್ಯಾರ್ಥಿಗಳು ಯೋಗ ಮಾಡುವ ಮೂಲಕ ಸಾರ್ಥಕತೆ ಮೆರೆದರು.

ಭಾರತೀಯ ವಿದ್ಯಾ ಭವನ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಅಶ್ವಿನಿ ಆಸ್ಪತ್ರೆ ಯೋಗ ಕೇಂದ್ರದ ವತಿಯಿಂದ ರಾಜಾಸೀಟು ಉದ್ಯಾನವನದಲ್ಲಿ ರಥಸಪ್ತಮಿ ಪ್ರಯುಕ್ತ ದೀರ್ಘ ದಂಡ ಸೂರ್ಯ ನಮಸ್ಕಾರ ಯೋಗ ಕಾರ್ಯಕ್ರಮ ನಡೆಯಿತು.

ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ. ಕೊಡಗು ವಿದ್ಯಾಲಯ, ಕೇಂದ್ರೀಯ ವಿದ್ಯಾಲಯ, ಫೀ.ಮಾ.ಕಾರ್ಯಪ್ಪ ಕಾಲೇಜು ಸೇರಿದಂತೆ ವಿವಿಧ ಶಾಲಾ, ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮಂಗಳವಾರ ಬೆಳಗ್ಗೆ 5.30 ರಿಂದ 7.30 ರವರೆಗೆ 108 ಬಾರಿ ಸೂರ್ಯ ನಮಸ್ಕಾರ ಮಾಡಿದರು.

ಸೂರ್ಯ ಮೂಡುತ್ತಿದ್ದಂತೆಯೇ ದೀರ್ಘ ದಂಡ ಹಾಕುವುದರಿಂದ ಅದರ ಕಿರಣಗಳು ದೇಹಕ್ಕೆ ತಾಗಿ ಆರೋಗ್ಯ ವರ್ಧನೆಯಾಗುತ್ತದೆ ಮತ್ತು ನರಗಳಿಗೆ ಶಕ್ತಿ ತುಂಬುತ್ತದೆ ಎಂದು ಯೋಗ ಶಿಕ್ಷಕರು ವಿವರಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: