ಕರ್ನಾಟಕಪ್ರಮುಖ ಸುದ್ದಿ

ರಾಜಧಾನಿ ಬೆಂಗಳೂರಲ್ಲಿ ಇಂದು, ನಾಳೆ ವಿದ್ಯುತ್ ಪೂರೈಕೆ ವ್ಯತ್ಯಯ

ಬೆಂಗಳೂರು (ಫೆ.13): ಬೆಂಗಳೂರಿನ ಹಲವೆಡೆ ಫೆಬ್ರವರಿ 13,14 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಎಚ್‌ಎಸ್‌ಆರ್ ಬಡಾವಣೆಯ ವಿದ್ಯುತ್ ವಿತರಣಾ ಕೇಂದ್ರದ ಎಫ್‌-2 ಹಾಗೂ ಎಫ್-10ರ ಫೀಡರ್‌ಗಳನ್ನು ತುರ್ತು ದುರಸ್ತಿ ಮಾಡಬೇಕಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಬುಧವಾರ ಹಾಗೂ ಗುರುವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಫೆ.13ರಂದು ಎಫ್-10ರ ಫೀಡರ್ ವ್ಯಾಪ್ತಿಯ ಮಂಗಮ್ಮನಪಾಳ್ಯ, ಮುನೇಶ್ವರ ಬಡಾವಣೆ, ಬೊಮ್ಮನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ, ಫೆ.14ರಂದು ಎಫ್‌-2ರ ಫೀಡರ್ ವ್ಯಾಪ್ತಿಯ ಹೊಸ ಪಾಳ್ಯ ಮುಖ್ಯರಸ್ತೆ, ರಾಜೀವ್‌ಗಾಂಧಿನಗರ, ಮದೀನ ನಗರ, ವಿನಾಯಕ ನಗರ, ಹೊಸೂರು ಮುಖ್ಯರಸ್ತೆ, ಗಾರ್ವೆಬಾವಿ ಪಾಳ್ಯ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: