ಕರ್ನಾಟಕಪ್ರಮುಖ ಸುದ್ದಿ

ಬಜೆಟ್‍ಗೆ ಮುಹೂರ್ತ ಇಟ್ಟಿದ್ದು ನಾನು: ಸಚಿವ ಹೆಚ್.ಡಿ .ರೇವಣ್ಣ

ಬೆಂಗಳೂರು (ಫೆ.13): ತಮಿಳುನಾಡು ಜ್ಯೋತಿಷಿ ನೋಡಿ ಬಜೆಟ್ ಮಂಡನೆಗೆ ಮೂಹರ್ತ ಇಟ್ಟಿದ್ದು ನಾನು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. ಸದನದಲ್ಲಿ ಆಡಿಯೋ ತನಿಖೆಯನ್ನು ಎಸ್‍ಐಟಿಗೆ ವಹಿಸಬೇಕು ಎಂಬ ಚರ್ಚೆ ಕುರಿತಂತೆ ರೇವಣ್ಣ ಅವರು ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ನೀಡಿದರು. ಆದರೆ ಈ ವೇಳೆ ಕಾಲೆಳೆದ ಸ್ಪೀಕರ್, ರೇವಣ್ಣ ಅವರು ಈಗ ಮಾತನಾಡುತ್ತಾರೆ 1 ನಿಮಿಷ ಲೇಟಾದರೆ ಅವರು ಮಾತಾಡಲ್ಲ ಎಂದರು.

ಬಳಿಕ ಮಾತನಾಡಿದ ರೇವಣ್ಣ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಈ ಬಾರಿ ಸಿಎಂ ಬಜೆಟ್ ಮಂಡಿಸಲ್ಲ ಎಂದು ಆರ್.ಅಶೋಕ್ ಹೇಳಿದ್ದರು. ಆದರೆ ಬಜೆಟ್ ಮಂಡನೆಗೆ ನೇನೇ ಜ್ಯೋತಿಷಿ ನೋಡಿ ಮುಹೂರ್ತ ಇಟ್ಟಿದ್ದೇನೆ. ತಪ್ಪೋಕೆ ಸಾಧ್ಯವೇ ಇಲ್ಲ ಎಂದರು. ರೇವಣ್ಣ ಅವರ ಮಾತಿಗೆ ಸದನದಲ್ಲಿ ನಗೆ ಉಕ್ಕಿತು. ಅಂತಿಮವಾಗಿ ಸ್ಪೀಕರ್ ನಿರ್ಧಾರವನ್ನು ಸಿಎಂ ಜಾರಿಗೆ ತರುತ್ತಾರೆ ಎಂದು ಹೇಳಿ ಮಾತು ಪೂರ್ಣಗೊಳಿಸಿದರು. (ಎನ್.ಬಿ)

Leave a Reply

comments

Related Articles

error: