ಕ್ರೀಡೆ

ಐಸಿಸಿ ಮಹಿಳಾ ರ‍್ಯಾಂಕಿಂಗ್: ಭಾರತದ ಜೆಮಿಮಾ 2ನೇ ಸ್ಥಾನಕ್ಕೆ

ದುಬೈ(ಫೆ.13): ಭಾರತದ ಮಹಿಳಾ ಕ್ರಿಕೆಟ್‌ ತಂಡದ ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಾಸ್‌, ಮಂಗಳವಾರ ಪ್ರಕಟಗೊಂಡ ಐಸಿಸಿ ಟಿ20 ಬ್ಯಾಟರ್‌ಗಳ ನೂತನ ಪಟ್ಟಿಯಲ್ಲಿ 4 ಸ್ಥಾನಗಳ ಏರಿಕೆ ಕಂಡು 2ನೇ ಸ್ಥಾನ ಪಡೆದಿದ್ದಾರೆ. ಅತ್ಯುತ್ತಮ ಲಯದಲ್ಲಿರುವ ಸ್ಮೃತಿ ಮಂಧನಾ ಸಹ 4 ಸ್ಥಾನಗಳ ಏರಿಕೆ ಕಂಡಿದ್ದು 6ನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಸ್ಪಿನ್ನರ್‌ ರಾಧಾ ಯಾದವ್‌ 10ನೇ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ತಂಡಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿ ಮುಂದುವರಿದಿದೆ. ಮಹಿಳಾ ಏಕದಿನ ಮಾದರಿಯಲ್ಲಿ ಸ್ಮೃತಿ ಮಂದಾನ ಬ್ಯಾಟರ್ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಹಿರಿಯ ಆಟಗಾರ್ತಿ ಮಿಥಾಲಿ ರಾಜ್ 5ನೇ ಸ್ಥಾನದಲ್ಲಿದ್ದಾರೆ. ಏಕದಿನ ಬೌಲಿಂಗ್‌ನಲ್ಲಿ ಜುಲನ್ ಗೋಸ್ವಾಮಿ 4ನೇ ಸ್ಥಾನದಲ್ಲಿದ್ದರೆ, ಆಲ್ರೌಂಡರ್ ವಿಭಾಗದಲ್ಲಿ ಭಾರತ ದೀಪ್ತಿ ಶರ್ಮಾ 4ನೇ ಸ್ಥಾನ ಅಲಂಕರಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: