ಪ್ರಮುಖ ಸುದ್ದಿಮೈಸೂರು

ಫೆ.17ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ‍್ಯಕ್ಷರ ಸ್ಥಾನದ ಚುನಾವಣೆ

ವೆಂಕಟನಾರಾಯಣ್ ಗೆ ಜಿಲ್ಲಾ ಬ್ರಾಹ್ಮಣ ಮಹಾಸಭಾ ಬೆಂಬಲ

ಮೈಸೂರು, ಫೆ.13 : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರ ಸ್ಥಾನಕ್ಕೆ ಇದೇ ಫೆ. 17 ರಂದು ನಗರದಲ್ಲಿ ನಡೆಯುವ ಚುನಾವಣೆಯಲ್ಲಿ ಈಗಿನ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ್ ಅವರನ್ನು ಪುನರಾಯ್ಕೆ ಮಾಡುವ ಮೂಲಕ ಬ್ರಾಹ್ಮಣ ಸಮುದಾಯದ ಏಳಿಗೆಗೆ ಅಗತ್ಯವಾದ ಕಾರ್ಯಕ್ರಮ ಮುಂದುವರಿಯಲು ಮತದಾರರು ಸಹಕರಿಸಬೇಕೆಂದು ಸಮುದಾಯದ ಪ್ರಮುಖ ಮುಖಂಡರು ಮನವಿ ಮಾಡಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಟಿ. ಪ್ರಕಾಶ್, ರಘುರಾಂ ವಾಜಪೇಯಿ, ಡಾ. ಭಾನುಪ್ರಕಾಶಶರ್ಮ, ಲಕ್ಷ್ಮಿಕಾಂತ್, ಅರಳುಮಲ್ಲಿಗೆ ಪಾರ್ಥಸಾರಥಿ, ಶಂಕರನಾರಾಯ್ ಇನ್ನಿತರರು, ಇಡೀ ಮೈಸೂರು ಕೇಂದ್ರ ವೆಂಕಟನಾರಾಯಣ್ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದ್ದು, ಅವರು ಪುನರಾಯ್ಕೆ ಆದಲ್ಲಿ ಸಮುದಾಯದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗಲಿದೆ.

ಸಮುದಾಯದ ಯುವಜನರಿಗೆ ಉದ್ಯೋಗಕ್ಕಾಗಿ ತರಬೇತಿ, ಬೆಂಗಳೂರಿನಲ್ಲಿ ಮಹಿಳಾ ಉದ್ಯೋಗಿಗಳಿಗೆ ವಸತಿ ಸೌಕರ್ಯ ಮೊದಲಾದವುಗಳ ವ್ಯಾಪ್ತಿ ಇನ್ನಷ್ಟು ಹೆಚ್ಚಲು ವೆಂಕಟನಾರಾಯಣ್ ನೆರವಾಗಲಿದ್ದಾರೆಂದರು.

ಈ ಬಳಿಕ ವೆಂಕಟನಾರಾಯಣ್ ಮಾತನಾಡಿ, ಹಾವನೂರು, ವೆಂಕಟಸ್ವಾಮಿ ಆಯೋಗದ ವೇಳೆಯೇ ಬ್ರಾಹ್ಮಣರಿಗೂ ಮೀಸಲಾತಿ ಬೇಕೆಂದು ಮಹಾಸಭಾ ಹೋರಾಡಿತು. ಜೊತೆಗೆ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆಗೂ ಶ್ರಮಿಸಿದೆ. ಆದ್ದರಿಂದ ಈ ರೀತಿಯ ಎಲ್ಲ ಕ್ರಮಗಳಿಗೆ ತಾವು ಪುನರಾಯ್ಕೆ ಆದಲ್ಲಿ ಇನ್ನಷ್ಟು ಶ್ರಮಿಸುವುದಾಗಿ ನುಡಿದರು.

ಸಮುದಾಯದ ಅನೇಕ ಪ್ರಮುಖರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: