ಕರ್ನಾಟಕಮೈಸೂರು

ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಮತ್ತು 6 ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಜಯಲಕ್ಷ್ಮಿಪುರಂ ಠಾಣೆಯ ಪೊಲೀಸರು 7 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ  ಕೆ.ಎಸ್. ರಂಗಪ್ಪ, ಎಂ.ಜಿ. ಕೃಷ್ಣನ್, ಡೀನ್ ಟಿ.ಡಿ. ದೇವೇಗೌಡ, ಉಪ ಕುಲಸಚಿವ ರಾಮನಾಥನ್ ನಾಯ್ಡು, ಕುಲಸಚಿವ ಪಿ.ಎಸ್. ನಾಯಕ, ಮಾಜಿ ಕುಲಸಚಿವ ಬಿ.ಎಸ್. ವಿಶ್ವನಾಥ್ ಮತ್ತು ನಿರ್ದೇಶಕ ಐಟಿ ಕಮಲೇಶ್ ವಿರುದ್ಧ ಹಣಕಾಸು ಅಧಿಕಾರಿ ಕೆ. ಖಾದರ್ ಪಾಷಾ ದೂರು ಸಲ್ಲಿಸಿದ್ದರು.

ವಿಶ್ವವಿದ್ಯಾನಿಲಯಗಳ ಕುಲಾಧಿಪತಿ, ರಾಜ್ಯಪಾಲ ವಜುಬಾಯಿ ರುಢಾಬಾಯಿ ವಾಲಾ ಅವರು ಇವರ ಮೇಲೆ ನೇರ ದೂರು ದಾಖಲಿಸಲು ನಿರ್ದೇಶಿಸಿದ್ದರು.

ರಂಗಪ್ಪ ಮತ್ತು ಕೃಷ್ಣನ್ ಅವರ ಅಧಿಕಾರಾವಧಿಯಲ್ಲಿ ಕಂಪ್ಯೂಟರ್ ಮತ್ತು ಫರ್ನಿಚರ್ ಖರೀದಿಯಲ್ಲಿ ನಡೆದ ಅವ್ಯವಹಾರ ಬೆಳಕಿಗೆ ಬಂದಿತ್ತು. ಘಟನೆಯ ಕುರಿತಂತೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.

Leave a Reply

comments

Related Articles

error: