ಕರ್ನಾಟಕಪ್ರಮುಖ ಸುದ್ದಿ

ನಾನೇ 10 ಬಿಜೆಪಿ ಶಾಸಕರನ್ನು ಖರೀದಿಸಬಲ್ಲೆ! ಜೆಡಿಎಸ್ ಶಾಸಕ

ಬೆಂಗಳೂರು (ಫೆ.13): ಬಿಜೆಪಿ ನಾಯಕರು ನನ್ನನ್ನು ಖರೀದಿಸುವುದಕ್ಕೆ ಸಾಧ್ಯವೇ ಇಲ್ಲ. ಅಗತ್ಯವಿದ್ದರೆ ನಾನೇ ಹತ್ತು ಬಿಜೆಪಿ ಶಾಸಕರನ್ನು ಖರೀದಿಸಬಲ್ಲೆ ಎಂದು ಜೆಡಿಎಸ್ ಶಾಸಕ ನಾರಾಯಣ ಗೌಡ ಹೇಳಿದ್ದಾರೆ.

ಇಷ್ಟು ದಿನ ನಾಪತ್ತೆಯಾಗಿದ್ದ-ನಂತರ ಮುಂಬೈನಲ್ಲಿದ್ದಾರೆ ಎನ್ನಲಾದ ಕೆ.ಆರ್. ಪೇಟೆ ಶಾಸಕ ನಾರಾಯಣ ಗೌಡ ಅವರು ಬೆಂಗಳೂರಿಗೆ ವಾಪಸ್ಸಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ನನ್ನನ್ನು ಎಂದಿಗೂ ಖರೀದಿಸುವುದಕ್ಕೆ ಸಾಧ್ಯವೇ ಇಲ್ಲ. ಅಗತ್ಯವಿದ್ದರೆ ನಾನೇ ಬಿಜೆಪಿಯ ಹತ್ತು ಶಾಸಕರನ್ನು ಖರೀದಿಸಬಲ್ಲೆ. ಫುಡ್ ಪಾಯ್ಸನ್ ಕಾರಣ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಆಸ್ಪತ್ರೆಯ ಬಿಲ್‍ಗಳೂ ನನ್ನ ಬಳಿ ಇವೆ. ನಮ್ಮ ಪಕ್ಷದಲ್ಲಿ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳಿದ್ದವು. ನಾವು ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ನಾರಾಯಣ ಗೌಡ ಹೇಳಿದ್ದಾರೆ.

ಬಾಂಬೆಯ ಹೊಟೇಲ್‍ನಲ್ಲಿ ಅವರಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಬಜೆಟ್ ಅಧಿವೇಶನದ ದಿನ ಆಸ್ಪತ್ರೆಯಿಂದಲೇ ವಿಡಿಯೋ ಮೆಸೇಜ್ ಕಳಿಸಿದ್ದ ನಾರಾಯಣಗೌಡರು ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದರು. ಇದಕ್ಕೂ ಮೊದಲು ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್‍ನ ಶಾಸಕರೊಂದಿಗೆ ನಾರಾಯಣಗೌಡರೂ ಇದ್ದರು ಎನ್ನಲಾಗಿತ್ತು. (ಎನ್.ಬಿ)

Leave a Reply

comments

Related Articles

error: