ದೇಶಪ್ರಮುಖ ಸುದ್ದಿ

ಕೃಷ್ಣಮೃಗ ಬೇಟೆ : ನಟ ಸಲ್ಮಾನ್ ಖಾನ್ ಖುಲಾಸೆ

ಕೃಷ್ಣಮೃಗ ಬೇಟೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ಜೋಧಪುರ್ ನ್ಯಾಯಾಲಯವು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ನಿರ್ದೋಷಿ ಎಂದು ಅಂತಿಮ ತೀರ್ಪು ನೀಡಿದೆ.

ಬಹುತಾರಾಂಗಣದ ಚಿತ್ರ ಹಮ್‍ ಸಾಥ್ ಸಾಥ್‍‍ ಹೈ ಸಿನಿಮಾ ಚಿತ್ರೀಕರಣ ವೇಳೆ ಜೋಧಪುರ್ ಸಮೀಪದ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಬೇಟೆಗೆ ಪರವಾನಗಿ ಇಲ್ಲದ ಬಂದೂಕು ಬಳಕೆ ಮಾಡಲಾಗಿತ್ತು. ಈ ಸಂಬಂಧ ಅರಣ್ಯ ಇಲಾಖೆಯೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.

1998ರಲ್ಲಿ ನಡೆದ ಘಟನೆಗೆ ಸಾಂದರ್ಭಿಕ ಸಾಕ್ಷ್ಯಗಳ ಕೊರತೆಯಿಂದಾಗಿ ಆರೋಪ ಸಾಬೀತಾಗದೆ ಸಲ್ಮಾನ್ ಖಾನ್‍ ಅವರನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2006ರ ಏಪ್ರಿಲ್ ಮತ್ತು 2007ರ ಆಗಸ್ಟ್ ನಲ್ಲಿ ಎರಡು ಬಾರಿ ಜೈಲುವಾಸ ಅನುಭವಿಸಿದ್ದರು. ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ.

Leave a Reply

comments

Related Articles

error: