ಪ್ರಮುಖ ಸುದ್ದಿ

ಚಾನೆಲ್ ಗಳ ಆಯ್ಕೆ ಮಾರ್ಚ್ 31ರವರೆಗೆ ವಿಸ್ತರಿಸಿದ ಟ್ರಾಯ್

ದೇಶ(ನವದೆಹಲಿ)ಫೆ.13:- ಟ್ರಾಯ್ ದೇಶದ ಜನತೆಗೆ ತಮ್ಮ ನೆಚ್ಚಿನ ಚಾನೆಲ್ ಗಳ ಆಯ್ಕೆಯ ದಿನವನ್ನು ಮಾರ್ಚ್ 31ರವರೆಗೆ ವಿಸ್ತರಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಟ್ರಾಯ್ ನಿಮಗಿಷ್ಟವಾದ ಚಾನೆಲ್ ಆಯ್ಕೆ ಮಾಡಲು ನಿಮಗೆ ಮಾರ್ಚ್ 31ರವರೆಗೆ ಅವಕಾಶವಿದೆ. ಬಹಳ ದಿನಗಳನ್ನು ನೀಡುತ್ತಿರುವುದರಿಂದ ಗ್ರಾಹಕರು ಅನುಕೂಲಕ್ಕೆ ತಕ್ಕಂತೆ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಡಿಟಿಹೆಚ್ ಸೇವೆಯಲ್ಲಿ ದೋಷವಿದ್ದರೆ ಮತ್ತು ಅದನ್ನು 72ಗಂಟೆಗಳೊಳಗೆ ನಿಗದಿಪಡಿಸದಿದ್ದಲ್ಲಿ ಗ್ರಾಹಕರು ಹಣ ಪಾವತಿಸಬೇಕಾಗಿಲ್ಲ. ಟ್ರಾಯ್ ಹೊಸ ನೀತಿ ಫೆ.1ರಿಂದಲೇ ಜಾರಿಯಲ್ಲಿದೆ. ಗ್ರಾಹಕರು ತಮ್ಮ ನೆಚ್ಚನ ಚಾನೆಲ್ ಗಳನ್ನು ಆಯ್ಕೆಮಾಡಿಕೊಂಡ ವೇಳೆ ಡಿಟಿಹೆಚ್(ಟಾಟಾ ಸ್ಕೈ, ಡಿಶ್ ಟಿವಿ, ವಿಡಿಯೋಕಾನ್, ಏರ್ ಟೆಲ್, ರಿಲಯನ್ಸ್ ಟಿವಿ) ಮತ್ತು ಕೇಬಲ್ ಆಪರೇಟರ್ ಗಳು 72ಗಂಟೆಯೊಳಗೆ ಗ್ರಾಹಕರಿಗೆ ಅವರ ಆಯ್ಕೆಗಳನ್ನು ಬದಲಿಸಿಕೊಡಬೇಕು ಎಂದು ಟ್ರಾಯ್ ತಿಳಿಸಿದೆ. ಟ್ರಾಯ್ ಅನುಸಾರ ದೇಶದಲ್ಲಿ 10ಕೋಟಿ ಮನೆಗಳಲ್ಲಿ ಕೇಬಲ್ ಸರ್ವೀಸ್, ಮತ್ತು 6.7ಕೋಟಿ ಡಿಟಿಹೆಚ್ ಸರ್ವೀಸ್ ಇದೆ. (ಎಸ್.ಎಚ್)

Leave a Reply

comments

Related Articles

error: