
ಮೈಸೂರು
ಕಾರು ಅಪಘಾತ : ಯುವಕ ಸಾವು
ಮೈಸೂರು,ಫೆ.13:- ಕಾರು ಅಪಘಾತಕ್ಕಿಡಾಗಿ ಯುವಕ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹುಲ್ಲೇನಹಳ್ಳಿ ಬಳಿ ಈ ಘಟನೆ ನಡೆದಿದೆ.
ಮೈಸೂರಿನ ಗೌರಿಶಂಕರ ನಗರದ ನಿವಾಸಿ ಧನುಷ್ ಮೃತ ಯುವಕನಾಗಿದ್ದು, ಅವರ ಸ್ನೇಹಿತರಾದ ವಿದ್ಯಾರಣ್ಯಪುರಂನ ಪ್ರಶಾಂತ್ ಹಾಗೂ ಮಂಡಿಮೊಹಲ್ಲಾದ ಗುರುಮೂರ್ತಿ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯನಿಮಿತ್ತ ಸ್ನೇಹಿತರು ಸೇರಿ ಮಡಿಕೇರಿಗೆ ತೆರಳಿದ್ದರು. ವಾಪಸ್ ಮೈಸೂರಿಗೆ ಬರುತ್ತಿದ್ದ ವೇಳೆ ಹುಲ್ಲೇನಹಳ್ಳಿ ಗೇಟ್ ಬಳಿ ಬ್ಯಾರಿಕೇಡ್ಗೆ ಕಾರು ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)