ಪ್ರಮುಖ ಸುದ್ದಿ

ವಿರಾಜಪೇಟೆ ತಾಲೂಕು ಜಾನಪದ ಪರಿಷತ್ ನೂತನ ಸಮಿತಿ ರಚನೆ

ರಾಜ್ಯ(ಮಡಿಕೇರಿ) ಫೆ.14 : – ವಿರಾಜಪೇಟೆ ತಾಲೂಕು ಜಾನಪದ ಪರಿಷತ್ ಘಟಕಕ್ಕೆ ಇತ್ತೀಚೆಗೆ ಪರಿಷತ್‍ನ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ನೇತೃತ್ವದಲ್ಲಿ  ಪ್ರಧಾನ ಕಾರ್ಯದರ್ಶಿ ರಜಿತಾ ಕಾರ್ಯಪ್ಪ, ಪ್ರಮೀಳಾ ನಾಚಯ್ಯ ಸಹಕಾರದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ವಿರಾಜಪೇಟೆಯ ಅಖೀಲ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಮಿತಿ ಸಂಚಾಲಕರಾಗಿ ಚಂಬಂಡ ಮುದ್ದು ಮುದ್ದಪ್ಪ, ಉಪಾಧ್ಯಕ್ಷರುಗಳಾಗಿ ಮನೆಯಪಂಡ ಕಾಂತಿ ಸತೀಶ್, ಮನೆಯಪಂಡ ದೇಚಮ್ಮ ಕಾಳಪ್ಪ, ಕಾರ್ಯದರ್ಶಿಯಾಗಿ ಟೋಮಿ ಥೋಮಸ್(ನಾ ಕನ್ನಡಿಗ), ಜಂಟಿ ಕಾರ್ಯದರ್ಶಿಯಾಗಿ ಪಿ.ಎನ್. ವಿನೋದ್, ಖಜಾಂಚಿಯಾಗಿ ವಿಮಲಾ ದಶರಥ, ಕಾನೂನು ಸಲಹೆಗಾರರಾಗಿ ದೇರಪಂಡ ಸಿ. ಧ್ರುವ, ಸಾಂಸ್ಕೃತಿಕ ಸಮಿತಿಗೆ ಚೇತನ್, ಟಿ.ಡಿ. ಮೋಹನ್, ಬಿ.ಆರ್. ಸತೀಶ್ ಹಾಗೂ ಇತರರನ್ನು ನೇಮಿಸಿಕೊಳ್ಳಲಾಯಿತು. ನಿರ್ದೇಶಕರುಗಳಾಗಿ ಸೋಮೆಯಂಡ ಕೌಶಲ್ಯ ಸತೀಶ್, ಪುಷ್ಪಲತಾ ಶಿವಪ್ಪ, ರಶ್ಮಿ, ನಳಿನಿ ಬಿಂದು, ಸುನಿತ ಸೋಮಣ್ಣ ಆಯ್ಕೆಗೊಂಡಿರುತ್ತಾರೆ.

ಕೊಡಗು ಜಿಲ್ಲಾ ಜಾನಪದ ಪರಿಷತ್ ನ ಜಿಲ್ಲಾಧ್ಯಕ್ಷರಾದ ಬಿ.ಜಿ. ಅನಂತಶಯನ ಅವರು ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ನಂತರ ತಮ್ಮ ಮಾತಿನಲ್ಲಿ, “ಜಾನಪದ ಜಾನಪದದ ಸೊಗಡು ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ನಮ್ಮ ಪರಿಷತ್ತ್‍ನ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಂತಾಗಬೇಕು, ಜಾತಿ-ಮತ, ಬೇಧವಿಲ್ಲದೆ ಕೇವಲ ಕಲೆಗೆ ಮಾತ್ರ ಬೆಲೆ ಕೊಡುವಂತೆ” ಸಲಹೆ ನೀಡಿದರು. ಇದು ರಾಜಕೀಯ ರಹಿತ ಸಂಘಟನೆಯಾಗಿದ್ದು ಜಾನಪದ ಕಲೆಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಜಾನಪದ ಪರಿಷತ್ತ್‍ನ ಉಪಾಧ್ಯಕ್ಷರುಗಳಾದ ಅಂಬೆಕಲ್ ಕುಶಾಲಪ್ಪ, ಐಮುಡಿಯಂಡ ರಾಣಿ ಮಾಚಯ್ಯ ಉಪಸ್ಥಿತರಿದ್ದರು.                (ಕೆಸಿಐ,ಎಸ್.ಎಚ್)

Leave a Reply

comments

Related Articles

error: