ದೇಶ

ಸೇನಾ ಸಮವಸ್ತ್ರದಲ್ಲಿ ದೆಹಲಿಗೆ ನುಸುಳಿರುವ ಉಗ್ರರು; ಹೈ ಅಲರ್ಟ್ ಘೋಷಣೆ; ತೀವ್ರ ತಪಾಸಣೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೈ ಅಲರ್ಟ್‍ ಘೋಷಿಸಲಾಗಿದೆ. ವಿಮಾನ ನಿಲ್ದಾಣ ಮತ್ತು ಮೇಟ್ರೋ, ರೈಲು ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಇದಕ್ಕೆ ಮುಖ್ಯ ಕಾರಣ, ಶಂಕಿತ ಏಳು ಮಂದಿ ಉಗ್ರರು ಭಾರತೀಯ ಸೇನಾಸಮವಸ್ತ್ರದಲ್ಲಿ ರಾಜಧಾನಿಗೆ ನುಸುಳಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಈಗ ಎಲ್ಲೆಡೆ ತೀವ್ರ ನಿಗಾ ವಹಿಸಲಾಗಿದೆ.

ಏಳು ಮಂದಿ ಉಗ್ರರು ಕ್ಯಾಪ್ಟನ್ ಮತ್ತು ಸುಬೇದಾರ್ ದರ್ಜೆಯ ಸಮವಸ್ತ್ರವನ್ನು ಧರಿಸಿದ್ದು, ಛಾಕ್ರಿ ಹೊರವಲಯ ಮತ್ತು ಗುರುದಾಸ್’ಪುರ್ ಗಡಿ ಭಾಗದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ದೇಶದ ರಾಜಧಾನಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Leave a Reply

comments

Related Articles

error: