ಕ್ರೀಡೆ

ಬಿಸಿಸಿಐ ಅನ್ನು ಅನುಸರಿಸಲಿದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ.!

ಕರಾಚಿ,ಫೆ.14-ಭಾರತ ಅಂಡರ್-19 ತಂಡಕ್ಕೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿ ಯಶಸ್ಸು ಕಂಡಿರುವ ಬಿಸಿಸಿಐ ಕ್ರಮವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅನುಸರಿಸಲು ನಿರ್ಧರಿಸಿದೆ.

ಅದರಂತೆ ಅಂಡರ್‌-19 ಹಾಗೂತಂಡದ ಕೋಚ್ಸ್ಥಾನಕ್ಕೆ ತಾರಾ ಕ್ರಿಕೆಟಿಗರನ್ನು ಆಯ್ಕೆ ಮಾಡಲು ಮುಂದಾಗಿದೆ.

ಪಾಕಿಸ್ತಾನ ಅಂಡರ್‌-19 ಕೋಚ್ಆಗಿ ಕಾರ್ಯನಿರ್ವಹಿಸಲು ಮಾಜಿ ಕ್ರಿಕೆಟಿಗ ಯೂನಿಸ್ಖಾನ್ಆಸಕ್ತಿ ತೋರಿದ್ದಾರೆ ಎನ್ನಲಾಗಿದ್ದು, ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ ಹುದ್ದೆಗೇರುವುದಾಗಿ ಹೇಳಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ರಾಹುಲ್ ದ್ರಾವಿಡ್ ಭಾರತಹಾಗೂ ಅಂಡರ್-19 ತಂಡದ ಕೋಚ್ ಆಗಿದ್ದು, 2018 ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ದ್ರಾವಿಡ್ ಗರಡಿಯಲ್ಲಿ ಪಳಗಿದ ಪೃಥ್ವಿ ಶಾ, ಶುಭ್ ಮನ್ ಗಿಲ್, ಮಯಾಂಕ್ ಅಗರ್ ವಾಲ್ ಟೀಂ ಇಂಡಿಯಾದಲ್ಲಿ ಮಿಂಚುತ್ತಿದ್ದಾರೆ. (ಎಂ.ಎನ್)

 

Leave a Reply

comments

Related Articles

error: