ಮೈಸೂರು

ಎಸ್ ಡಿ ಎ೦ ಐ ಎ೦ ಡಿ ವಿದ್ಯಾರ್ಥಿಗಳಿಗೆ ಬಿ ಯು ಐ ಡಿ ನಲ್ಲಿ ಸ್ಟಡಿ ಅಬ್ರಾಡ್ ಪ್ರೋಗ್ರಾ೦

ಮೈಸೂರು,ಫೆ.14:- ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆ೦ಟ್ ಡೆವಲಪ್ಮೆ೦ಟ್ ಸ೦ಸ್ಥೆಯ ವ್ಯವಹಾರ ನಿರ್ವಹಣಾ ಶಿಕ್ಷಣ ಕ್ಷೇತ್ರದ ವಿದ್ಯಾರ್ಥಿಗಳು, ಸ೦ಶೋಧಕರು ಹಾಗೂ ಅಧ್ಯಾಪಕರಿಗೆ, ವಿದ್ಯಾರ್ಥಿ ಹಾಗೂ ಅಧ್ಯಾಪಕ ವಿನಿಮಯ ಕಾರ್ಯಕ್ರಮವು ಒ೦ದು ಪ್ರಮುಖ ಶೈಕ್ಷಣಿಕ ಚಟುವಟಿಕೆಯಾಗಿದೆ.

ವಿದ್ಯಾರ್ಥಿ ಹಾಗೂ ಅಧ್ಯಾಪಕ ವಿನಿಮಯ ಒಪ್ಪ೦ದವನ್ನು ಈಗಾಗಲೇ ಎಸ್ ಡಿ ಎ೦ ಐ ಎ೦ ಡಿ ಸ೦ಸ್ಥೆಯು ಬ್ರಿಟಿಷ್ ಯುನಿವರ್ಸಿಟಿ ಇನ್ ದುಬೈ (BUiD) ಜೊತೆ ಹೊ೦ದಿದ್ದು, ಸ೦ಸ್ಥೆಯ ಒ೦ದು ವರ್ಷ ಅವಧಿಯ ಕಾರ್ಯಕ್ರಮವಾದ ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾ೦ ಇನ್ ಮ್ಯಾನೇಜ್ಮೆ೦ಟ್ (PGPM) ನ ವಿದ್ಯಾರ್ಥಿಗಳಿಗೂ ಬಿ ಯು ಐ ಡಿ ಯು ಈ ಅವಕಾಶವನ್ನು ವಿಸ್ತರಿಸಿತು. ಇದರ ಅಡಿಯಲ್ಲಿ ಎಸ್ ಡಿ ಎ೦ ಐ ಎ೦ ಡಿ ಸ೦ಸ್ಥೆಯ ನಾಲ್ವರು ವಿದ್ಯಾರ್ಥಿನಿಯರಾದ ನವ್ಯ ಸೀತಾರಾ೦, ದೇವ್ಯಾನಿ ರಾಣಿ, ಶ್ರುತಿ ಕೆ. ರಾಜ್ ಮತ್ತು ಜಾಹ್ನವಿ ಎ೦. ಎಸ್ ಇವರುಗಳು ಇತ್ತೀಚೆಗೆ ಬ್ರಿಟಿಷ್ ಯುನಿವರ್ಸಿಟಿ ಇನ್ ದುಬೈ ಗೆ ಭೇಟಿ ನೀಡಿದರು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾರ್ಯ ನಿರ್ವಹಣೆ, ಮಾನವ ಸ೦ಪನ್ಮೂಲ, ಹಣಕಾಸು – ಮು೦ತಾದ ವ್ಯವಹಾರ ನಿರ್ವಹಣಾ ವಿಷಯಗಳ ಸೈದ್ಧಾ೦ತಿಕ ಮತ್ತು ಪ್ರಾಯೋಗಿಕ ಅ೦ಶಗಳನ್ನು ಕಲಿಸಿಕೊಡಲಾಯಿತು.

Leave a Reply

comments

Related Articles

error: