
ಮೈಸೂರು,ಫೆ.14 : ಕಾವೇರಿ ಹಾರ್ಟ್ ಅಂಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ 10ನೇ ವಾರ್ಷಿಕೋತ್ಸವವನ್ನು ಫೆ.17ರಂದು ಸಂಜೆ 6 ಗಂಟೆಗೆ ಕಂಠೀರವ ನರಸಿಂಹರಾಜ ಕ್ರೀಡಾ ಕ್ಲಬ್ ನ ಗಾಯತ್ರಿದೇವಿ ಪೆವಿಲಿಯನ್ ನಲ್ಲಿ ಏರ್ಪಡಿಸಲಾಗಿದೆ ಎಂದು ಆಸ್ಪತ್ರೆ ಅಧ್ಯಕ್ಷ ಡಾ.ಜಿ.ಆರ್.ಚಂದ್ರಶೇಖರ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮುಖ್ಯ ಅತಿಥಿಯಾಗಿದ್ದಾರೆ, ಮೇಯರ್ ಪುಷ್ಪಲತ ಜಗನ್ನಾಥ್ ಹಾಜರಿರುವರು, ದಶಮಾನೋತ್ಸವದ ಅಂಗವಾಗಿ ಫೆ.14 ರಿಂದ 28ರವರೆಗೆ ಹೊರ ರೋಗಿಗಳಿಗೆ ಶೆ.25ರಷ್ಟು ಹಾಗೂ ತಪಾಸಣೆಗಾಗಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಜಿಲ್ಲಾ ಪತ್ರಕರ್ತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಂತ ಹಂತವಾಗಿ ಮೇಲ್ದರ್ಜೆಗೇರಿರುವ ಸ್ಪತ್ರೆಯಲ್ಲಿ ಹೃದಯರೋಗ, ಮೂತ್ರರೋಗ, ಮೂತ್ರಪಿಂಡ, ನರರೋಗ, ಪಚನಾಂಗಶಾಸ್ತ್ರ, ಶ್ವಾಸಕೋಶ, ಉನ್ನತ ಮಟ್ಟದ ತೀವ್ರ ನಿಗಾ ಘಟಕವು ಕಾರ್ಯನಿರ್ವಹಿಸುತ್ತಿದೆ, ಅಲ್ಲದೇ ಶೇ.25ಕ್ಕಿಂತಹೆಚ್ಚು ಬಿಎಲ್ಎಸ್ ಮತ್ತು ಎಸಿಎಲ್ ಎಸ್ ಟ್ರೇನಿಂಗ್ ಪ್ರೋಗ್ರಾಮ್ ಮಾಡಲಾಗುತ್ತಿದೆ,
ಡಾ.ಬಿ.ಎನ್.ರಾಜೀವ್, ಸಂದೀಪ್ ಪಟೇಲ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)