ಕ್ರೀಡೆ

ಟೆಸ್ಟ್ ರ್ಯಾಂಕಿಂಗ್ ಪಟ್ಟಿ: ಅಗ್ರಸ್ಥಾನದಲ್ಲಿ ಭಾರತ, ಕೊಹ್ಲಿ

ದುಬೈ,ಫೆ.14-ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇದರ ಜತೆಗೆ ಟೆಸ್ಟ್ ಬ್ಯಾಟಿಂಗ್ ಪಟ್ಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ ನಂ.1 ಆಗಿದ್ದಾರೆ.

ಭಾರತ ತಂಡ ರ್ಯಾಂಕಿಂಗ್ ಪಟ್ಟಿಯಲ್ಲಿ 116 ರೇಟಿಂಗ್ ಅಂಕಗಳನ್ನು ಹೊಂದಿ ಅಗ್ರಸ್ಥಾನದಲ್ಲಿದೆ. ಕೊಹ್ಲಿ 922 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ.

ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಅಂತರದ ಹೀನಾಯ ಸೋಲಿಗೆ ಶರಣಾಗಿರುವ ಇಂಗ್ಲೆಂಡ್, ಐದನೇ ಸ್ಥಾನಕ್ಕೆ ಕುಸಿದಿದೆ. ಇನ್ನೊಂದೆಡೆ ವಿಂಡೀಸ್ ಏಳು ರೇಟಿಂಗ್ ಪಾಯಿಂಟ್ಗಳನ್ನು ಪಡೆದಿದೆ.

ಭಾರತ (116), .ಆಫ್ರಿಕಾ (110), ನ್ಯೂಜಿಲೆಂಡ್ (107), ಆಸ್ಟ್ರೇಲಿಯಾ (104), ಇಂಗ್ಲೆಂಡ್ (104), ಶ್ರೀಲಂಕಾ (89), ಪಾಕಿಸ್ತಾನ (88), ವೆಸ್ಟ್ಇಂಡೀಸ್ (77), ಬಾಂಗ್ಲಾದೇಶ (69), ಜಿಂಬಾಬ್ವೆ (13).

ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ಪಟ್ಟಿ ಇಂತಿದೆ: ವಿರಾಟ್ ಕೊಹ್ಲಿ (922), ಕೇನ್ ವಿಲಿಯಮ್ಸನ್ (897), ಚೇತೇಶ್ವರ ಪೂಜಾರ (881), ಸ್ಟೀವ್ ಸ್ಮಿತ್ (857), ಹೆನ್ನಿ ನಿಕೋಲಸ್ (763), ಜೋ ರೂಟ್ (763), ಡೇವಿಡ್ ವಾರ್ನರ್ (756), ಏಡೆನ್ ಮಾರ್ಕ್ರಂ (741), ಹಾಶೀಮ್ ಆಮ್ಲಾ (711), ಡೀನ್ ಎಲ್ಗರ್ (693). (ಎಂ.ಎನ್)

Leave a Reply

comments

Related Articles

error: