ದೇಶ

ಉಗ್ರರ ದಾಳಿ: 18 ಸಿಆರ್ ಪಿಎಫ್ ಯೋಧರು ಹುತಾತ್ಮ

ಶ್ರೀನಗರ,ಫೆ.14- ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ನಡೆಸಿದ ಬಾಂಬ್ ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪಡೆಯ 18 ಸಿಬ್ಬಂದಿ ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಶ್ರೀನಗರದಿಂದ ಮೂವತ್ತು ಕಿಲೋಮಿಟರ್ ದೂರದ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿರುವ ಲೆಥ್ ಪುರ್ ನಲ್ಲಿ ಈ ಘಟನೆ ನಡೆದಿದೆ. ಸಿಆರ್ ಪಿಎಫ್ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನವನ್ನು ಗುರಿ ಮಾಡಿಕೊಂಡು ಉಗ್ರಗಾಮಿಗಳು ಈ ದಾಳಿ ನಡೆಸಿದ್ದಾರೆ.

ವಾಹನವು ಸಿಅರ್ ಪಿಎಫ್ ಬೆಟಾಲಿಯನ್ 54ಕ್ಕೆ ಸೇರಿದ್ದಾಗಿತ್ತು. ಈ ಸ್ಫೋಟದ ಹೊಣೆಯನ್ನು ಜೈಷ್-ಇ-ಮೊಹ್ಮದ್ ಹೊತ್ತಿಕೊಂದಿದೆ. ಸ್ಥಳೀಯ ಯುವಕರಿಂದ ನಡೆದ ಫಿದಾಯಿನ್ ದಾಳಿ ಎಂದು ಉಗ್ರ ಸಂಘಟನೆ ಹೇಳಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ವಕ್ತಾರರು ಈ ದುರ್ಘಟನೆಯನ್ನು ಖಾತ್ರಿ ಪಡಿಸಿದ್ದು, ಸುಧಾರಿತ ಸ್ಫೋಟಕ ಸಲಕರಣೆ ಬಳಸಿ ಸ್ಫೋಟ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಸುಧಾರಿತ ಸ್ಪೋಟಕವು ಆಟೋರಿಕ್ಷಾದಲ್ಲಿತ್ತು. ಅದನ್ನು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿತ್ತು. ಸ್ಫೋಟದ ನಂತರ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಯನ್ನು ಗುರಿ ಮಾಡಿಕೊಂಡು ದಾಳಿ ನಡೆಸಲಾಗಿದೆ. (ಎಂ.ಎನ್)

Leave a Reply

comments

Related Articles

error: