ದೇಶ

ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ, ಪಾಕ್ ಗೆ ಪಾಠ ಕಲಿಸಿ: ಹುತಾತ್ಮ ಯೋಧನ ತಂದೆಯ ನುಡಿ

ಬಾಗಲ್ಪುರ,(ಬಿಹಾರ),ಫೆ.1-ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮನಾದ ಯೋಧನ ತಂದೆ ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ. ಆದರೆ ಪಾಕಿಸ್ತಾನಕ್ಕೆ ಪಾಠ ಕಲಿಸಿ ಎಂದಿದ್ದಾರೆ.

ಬಿಹಾರದ ಬಾಗಲ್ಪುರದ ನಿವಾಸಿ ಸಿಆರ್ ಪಿಎಫ್ ಯೋಧ ರತನ್ ಠಾಕೋರ್ ಅವರ ತಂದೆ, `ಮಾತೃಭೂಮಿಯ ಸೇವೆಗಾಗಿ ಒಬ್ಬ ಮಗನನ್ನು ಕಳೆದುಕೊಂಡೆ, ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ, ದೇಶಕ್ಕೋಸ್ಕರ ಅವನನ್ನೂ ಬಿಟ್ಟುಕೊಡಲು ಸಿದ್ದನಿದ್ದೇನೆ, ಆದರೆ ಪಾಕಿಸ್ತಾನಕ್ಕೆ ಮಾತ್ರ ಸರಿಯಾದ ಪಾಠವನ್ನು ಕಲಿಸಿಎಂದು ಕಣ್ಣೀರುಡುತ್ತಲೇ ಈ ಮಾತನ್ನು ಹೇಳಿದ್ದಾರೆ.

ಪ್ರತೀ ಬಾರಿ ಉಗ್ರರ ದಾಳಿಯಾದಾಗಲೂ, ಅದರ ಮೂಲ ಪಾಕಿಸ್ತಾನ ಎನ್ನುವುದು ವಿಶ್ವಕ್ಕೆ ಗೊತ್ತಿರುವ ವಿಚಾರ. ಹುತಾತ್ಮರಾದ ಕುಟುಂಬದ ಸದಸ್ಯರು ಅದೆಷ್ಟೋ ಬಾರಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: