ಮೈಸೂರು

ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ : ಎನ್.ನಾರಾಯಣ ಶಾಸ್ತ್ರಿ

ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಬಡತನ ಹೆಚ್ಚಿದೆ. ಅದರಲ್ಲೂ ಮಹಾನಗರಗಳಲ್ಲಿ ಬಡತನದ ಪ್ರಮಾಣ ತೀವ್ರವಾಗಿದೆ. ಬಡತನವನ್ನು ಕಡಿಮೆ ಮಾಡಬಹುದೇ ಹೊರತು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು  ನಗರ ಮತ್ತು ಪ್ರಾದೇಶಿಕ ಯೋಜನೆಗಳ ಅಭಿವೃದ್ಧಿ ಸಂಸ್ಥೆ ಪ್ರಾಧ್ಯಾಪಕ ಎನ್.ನಾರಾಯಾಣ ಶಾಸ್ತ್ರಿ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯ ಸಾಮಾಜಿಕವಾಗಿ ಹೊರಗುಳಿಯುವ  ಮತ್ತು ಒಳಗೊಳ್ಳುವ ನೀತಿಯ ಅಧ್ಯಯನ ಕೇಂದ್ರದಿಂದ ಮಾನಸಗಂಗೋತ್ರಿಯ ಇಎಂಎಎಂಆರ್‍ಸಿ ಸಭಾಂಗಣದಲ್ಲಿ  ಬುಧವಾರ ಆಯೋಜಿಸಿದ್ದ ಬಡತನ ಅಸಮಾನತೆ ಮತ್ತು ಒಳಗೊಳ್ಳುವ ವಿಷಯದ ಕುರಿತ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಗರದ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗುವುದರಿಂದ ಅಲ್ಲಿನವರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟವಾಗುತ್ತದೆ.

ಸಾರ್ವಜನಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸದಿದ್ದರೆ ಮಾನವ ಅಭಿವೃದ್ಧಿ ಸೂಚಕ ಬೆಳವಣಿಗೆಯಾಗುವುದಿಲ್ಲ. ಕೊಳಚೆ ಪ್ರದೇಶದಿಂದ ಮಾಲಿನ್ಯ ಹೆಚ್ಚಾಗುತ್ತದೆ,ಜನಸಂಖ್ಯೆಯ ಬಗ್ಗೆ ಮಾಹಿತಿ ಸಿಗುವುದಿಲ್ಲ. ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಕಾನೂನು ಅಧ್ಯಯನ ವಿಭಾಗದ ಡಾ. ರಮೇಶ್, ಡಾ. ನಂಜುಂಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: