ಮೈಸೂರು

ಸ್ವಾಮಿ ವಿವೇಕಾನಂದರ ಜೀವನವೇ ಭಾರತದ ಮಹತ್ವ ತಿಳಿಸುತ್ತದೆ : ಡಾ.ಶಾಂತಿವ್ರತಾನಂದಜೀ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿದರೆ ಭಾರತದ ಧರ್ಮ, ಸಂಸ್ಕೃತಿ, ಭಾರತೀಯ ಆಲೋಚನೆಗಳು ಮತ್ತು ವಿಶ್ವದಲ್ಲಿ ಭಾರತದ ಮಹತ್ವ ಏನು ಎಂಬುದಕ್ಕೆ ಉತ್ತರರೂಪವಾಗಿದ್ದಾರೆ ಎಂದು ಶ್ರೀರಾಮಕೃಷ್ಣಾಶ್ರಮದ ರಾಷ್ಟ್ರೀಯ ಸಂಚಾಲಕ ಡಾ.ಶಾಂತಿವ್ರತಾನಂದಜೀ ಮಹರಾಜ್ ತಿಳಿಸಿದರು.

ಅವರು, ಈಚೆಗೆ ಜೆಎಸ್‍ಎಸ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 154ನೇ ಜಯಂತಿಯಂಗವಾಗಿ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ಸಪ್ತಾಹ’ ದಲ್ಲಿ ಪಾಲ್ಗೊಂಡು ಮಾತನಾಡಿ ಸ್ವಾಮಿ ವಿವೇಕಾನಂದರ ಚಿಂತನೆಗಳು, ಸಂದೇಶಗಳು ಯುವ ಪೀಳಿಗೆಗೆ ಉತ್ತಮ ಆದರ್ಶ, ಚಾರಿತ್ರ್ಯ ಮೌಲ್ಯಯುತ ಭವಿಷ್ಯ ರೂಪಿಸಿ ಸಾರ್ಥಕತೆಯ ಬದುಕು ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸಲು ಪ್ರೇರಕವಾಗುವುದು. ದಾರ್ಶನಿಕರಾದ ಸ್ವಾಮಿವಿವೇಕಾನಂದ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆಯವರಂತಹ ಚಿಂತನೆಗಳು ಯುವ ಸಮುದಾಯಕ್ಕೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದರು ದೇಶ ಕಂಡ ಮಹಾಜ್ಞಾನಿ, ಸಂತ, ವೀರ ಸನ್ಯಾಸಿ. ಭಾರತದ ಸನಾತನ ಸಂಸ್ಕೃತಿಯ ಮಹತ್ವವನ್ನು ಪ್ರಪಂಚಕ್ಕೆ ಸಾರಿ ದೇಶದ ಘನತೆಯನ್ನು ಎತ್ತಿ ಹಿಡಿದವರು ಅವರ ಬದುಕು ಮತ್ತು ವಿಚಾರಧಾರೆಗಳು ಎಂದಿಗೂ ಮೌಲ್ಯಯುತ ಎಂದರು. ಮಹನೀಯರನ್ನು ಜಯಂತಿ ಸಂದರ್ಭ ಮಾತ್ರ ಸ್ಮರಿಸದೆ ಅವರ ಆದರ್ಶಗಳನ್ನು ಅನುಸರಿಸಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ, ಉಪನ್ಯಾಸಕ ಬಿ.ಎಲ್.ಕಿರಣ್, ಎನ್.ಸಂತೋಷ್ ಕುಮಾರ್ ಹಾಜರಿದ್ದರು.

Leave a Reply

comments

Related Articles

error: