ಮೈಸೂರು

ಅಕ್ರಮವಾಗಿ ವಿದೇಶಿ ಸಿಗರೇಟ್ ಮಾರಾಟ: 4,900 ರೂ. ದಂಡ ವಸೂಲಿ ಮಾಡಿದ ತಂಬಾಕು ನಿಯಂತ್ರಣ ಮಂಡಳಿ

ನಗರದ ಜಯಲಕ್ಷ್ಮೀಪುರಂನ ಶಿಕ್ಷಣ ಸಂಸ್ಥೆಗಳ ಸುತ್ತ ಅಕ್ರಮವಾಗಿ ವಿದೇಶಿ ಸಿಗರೇಟು ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಾಳಿ ನಡೆಸಿದ ಜಿಲ್ಲಾ ತಂಬಾಕು ನಿಷೇಧ ಕೋಶದ ಸರ್ವೇಕ್ಷಣಾ ಸಿಬ್ಬಂದಿ, ಒಟ್ಟು 27 ಪ್ರಕರಣಗಳನ್ನು ದಾಖಲಿಸಿ, 4,900 ರೂ. ದಂಡ ವಸೂಲಿ ಮಾಡಿದ್ದಾರೆ.

ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ ಅನ್ವಯ ಶಾಲೆ-ಕಾಲೇಜುಗಳ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನ ಮಾರಾಟ ನಿಷಿದ್ಧ. ಆದರೆ ಜಯಲಕ್ಷ್ಮೀಪುರಂ ಹಾಗೂ ಪಡುವಾರಳ್ಳಿಯ ಶಿಕ್ಷಣಸಂಸ್ಥೆಗಳ ಸುತ್ತ ವಿದೇಶಿ ಸಿಗರೇಟು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಜಯಲಕ್ಷ್ಮೀಂಪುರಂ ಠಾಣೆ ಪೊಲೀಸರೊಂದಿಗೆ ಸರ್ವೇಕ್ಷಣಾ ಘಟಕದ ಸಿಬ್ಬಂದಿ ಮಂಗಳವಾರ ದಾಳಿ ನಡೆಸಿ ಪರಿಶೀಲಿಸಿದರು.

ತಂಬಾಕು ಉತ್ಪನ್ನ ಪತ್ತೆಯಾದ ಅಂಗಡಿಗಳಿಗೆ ದಂಡ ವಿಧಿಸಲಾಗಿದ್ದು, ಅಂಗಡಿಗಳನ್ನು ತೆರವುಗೊಳಿಸುವಂತೆ ಪೊಲೀಸರಿಗೆ ಶಿಫಾರಸ್ಸು ಮಾಡಿದ್ದಾರೆ.

Leave a Reply

comments

Related Articles

error: