ಮೈಸೂರು

ಕಾರಿನ ಗ್ಲಾಸ್ ಒಡೆದು ಕಳವು ಮಾಡುವ ಕುಖ್ಯಾತ ಅಂತರರಾಜ್ಯ ಮೂವರು ಕಳ್ಳರ ಬಂಧನ

ಮೈಸೂರು,ಫೆ.16:- ಮೈಸೂರು ನಗರ ದೇವರಾಜ ಪೊಲೀಸರು  ಟೌನ್ ಹಾಲ್ ಮುಂಭಾಗದಲ್ಲಿದ್ದ ಕಾರ್ಯಾಚರಣೆ ನಡೆಸಿ ಕಾರು ಗ್ಲಾಸ್ ಒಡೆದು ಕಳುವು ಮಾಡುವ ಕುಖ್ಯಾತ ಅಂತರರಾಜ್ಯ ರಾಮ್‍ಜೀನಗರ ಗ್ಯಾಂಗ್‍ನ ಮೂವರು ಕಳ್ಳರನ್ನು ಬಂಧಿಸಿದ್ದಾರೆ.

ಭಾರತೀರಾಜನ್ ಬಿನ್ ಇಡುಂಬಣ್, (38), ಗಾಂಧಿನಗರ, ರಾಮ್‍ಜೀನಗರ, ಶ್ರೀರಂಗಂ ತಾಲೋಕ್, ತಿರುಚ್ಚಿ ಜಿಲ್ಲೆ, ತಮಿಳುನಾಡು ರಾಜ್ಯ, ಜ್ಞಾನಪ್ರಕಾಶ್ ಬಿನ್ ಇಡುಂಬಣ್,( 35), ಗಾಂಧಿನಗರ, ರಾಮ್‍ಜೀನಗರ, ಶ್ರೀರಂಗಂ ತಾಲೋಕ್, ತಿರುಚ್ಚಿ ಜಿಲ್ಲೆ, ತಮಿಳುನಾಡು ರಾಜ್ಯ ಎಂಬವರನ್ನು  ದಸ್ತಗಿರಿ ಮಾಡಿ ವಿಚಾರ ಮಾಡಲಾಗಿ, ಇವರು ನೀಡಿದ ಸುಳಿವಿನ ಮೇರೆಗೆ ಇವರ ಮತ್ತೊಬ್ಬ ಸಹಚರನಾದ  ಟೈಲರ್ ಪ್ರಕಾಶ್ ಬಿನ್ ಸುಂದರಮ್, (56), ಗಾಂಧಿನಗರ, ರಾಮ್‍ಜೀನಗರ, ಶ್ರೀರಂಗಂ ತಾಲೋಕ್, ತಿರುಚ್ಚಿ ಜಿಲ್ಲೆ, ತಮಿಳುನಾಡು ರಾಜ್ಯ  ಎಂಬಾತನನ್ನು ಬಂಧಿಸಿದ್ದಾರೆ. ತಮಿಳುನಾಡಿನ ರಾಮ್‍ಜೀ ನಗರದಲ್ಲಿ ದಸ್ತಗಿರಿ ಮಾಡಿ ವಿಚಾರ ಮಾಡಲಾಗಿ,  ಇವರುಗಳು ಮತ್ತಿತರ ಆರೋಪಿಗಳಾದ  ಡೆಲ್ಲಿರಾಜನ್, ಕದರಿವನ್, ಗೋಕುಲ್‍ರವರುಗಳ ಜೊತೆಯಲ್ಲಿ  ಸೇರಿಕೊಂಡು 05/02/2019 ರಂದು ಎಸ್.ಆರ್. ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಂದ ನಗದು ದರೋಡೆ ಮಾಡಿದ್ದು, ಹಾಗೂ  ದೇವರಾಜ ಠಾಣಾ ವ್ಯಾಪ್ತಿಯ ವಿವಿಧ 05 ಸ್ಥಳಗಳಲ್ಲಿ  ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಕಾರ್ ಗ್ಲಾಸ್‍ಗಳನ್ನು ಒಡೆದು  ಕಾರಿನಲ್ಲಿದ್ದ  ನಗದು, ಲ್ಯಾಪ್‍ಟಾಪ್ ಮತ್ತು ಚಿನ್ನಾಭರಣಗಳಿದ್ದ ಬ್ಯಾಗ್‍ಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ಆರೋಪಿತರಿಂದ ಒಟ್ಟು 4180ರೂ. ನಗದು  ಹಣ ಹಾಗೂ 06 ಲ್ಯಾಪ್‍ಟಾಪ್ ಬ್ಯಾಗ್‍ಗಳನ್ನು  ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದ್ದು,  ಈ ಆರೋಪಿಗಳು ಪತ್ತೆಯಾದಲ್ಲಿ ಇನ್ನೂ ಹೆಚ್ಚಿನ ನಗದು, ಲ್ಯಾಪ್‍ಟಾಪ್‍ಗಳು ಮತ್ತು ಚಿನ್ನಾಭರಣ ಸಿಗುವ ಸಂಭವವಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಆರೋಪಿಗಳು ಕುಖ್ಯಾತ ಅಂತರರಾಜ್ಯ ಕಳ್ಳರಾದ ತಮಿಳುನಾಡಿನ ರಾಮ್‍ಜೀನಗರ ಗ್ಯಾಂಗ್‍ನ ಆಸಾಮಿಗಳಾಗಿರುವುದು ತಿಳಿದು ಬಂದಿದೆ.

ಪತ್ತೆ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಂ  ಅಮಟೆರವರ ಮಾಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ. ಗಜೇಂದ್ರಪ್ರಸಾದ್‍ ನೇತೃತ್ವದಲ್ಲಿ ದೇವರಾಜ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಸನ್ನಕುಮಾರ್, ಪಿ.ಎಸ್.ಐ ಎಸ್ ರಾಜು ಮತ್ತು ಎಎಸ್‍ಐ ಉದಯಕುಮಾರ್, ಸಿಬ್ಬಂದಿಯವರಾದ ವೇಣುಗೋಪಾಲ, ಸೋಮಶೆಟ್ಟಿ, ಸುರೇಶ್, ಮಂಜುನಾಥ್, ಉಮೇಶ್, ನಂದೀಶ, ಪ್ರಕಾಶ್ ಮತ್ತು ಚಾಲಕರಾದ ವಸಂತ  ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: