ಮೈಸೂರು

ದೇಶವನ್ನು ಕಾಯುವ ಸೈನಿಕರಿಗೆ ಮಹತ್ವ ನೀಡಿ,ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಸ್ಪೆಶಲ್ ಪವರ್ ತೆಗೆದು ಹಾಕಲು ಒತ್ತಾಯಿಸಿ ರ್ಯಾಲಿ

ಮೈಸೂರು,ಫೆ.16:- ನಮ್ಮ ದೇಶವನ್ನು ಕಾಯುವ ಸೈನಿಕರಿಗೆ ಮಹತ್ವ ನೀಡಿ, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತೆಗೆದು ಹಾಕಿ, ಭಾರತ ಸಂವಿಧಾನದೊಳಗೆ ಸೇರಿಸಿ ಎಂದು ಒತ್ತಾಯಿಸಿ ಎಸ್ ಜೆ ಸಿಇ, ಜೆಎಸ್ ಎಸ್ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ರ್ಯಾಲಿ ನಡೆಸಿದರು.

ಇಂದು ರ್ಯಾಲಿ ನಡೆಸಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಛೇರಿ ಬಳಿ ಜಮಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅಕ್ಷಯ್ ಶೆಟ್ಟಿ 42ಸೈನಿಕರು ಹುತಾತ್ಮರಾಗಿದ್ದಾರೆ.  ತುಂಬಾ ಸೈನಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಇಲ್ಲಿ ಏನಾಗಿದೆ ಅಂದರೆ ಓರ್ವ ಚಿತ್ರ ನಟ ಸತ್ತಿದ್ದಾನೆ ಅಂತ ಗೊತ್ತಾದರೆ ರಜೆ ಕೊಡುತ್ತಾರೆ, ಪ್ರತಿಭಟನೆ ಮಾಡುತ್ತಾರೆ. ಅವರಿಗೋಸ್ಕರ ಬೇಡ್ಕೊತಾರೆ. ಶ್ರದ್ದಾಂಜಲಿ ಮಾಡುತ್ತಾರೆ. ಆದರೆ ಸೈನಿಕರಿಗೆ ಬೆಲೆನೇ ಇಲ್ಲ. ಅದಕ್ಕಾಗಿ ನಾವು ರ್ಯಾಲಿ ನಡೆಸುತ್ತಿದ್ದೇವೆ. ನಮ್ಮ ರ್ಯಾಲಿಯ ಮುಖ್ಯ ಉದ್ದೇಶ ಜಮ್ಮು-ಕಾಶ್ಮೀರಕ್ಕೆ ಅದರದ್ದೇ ಪ್ರತ್ಯೇಕ ಸಂವಿಧಾನವಿದೆ. ಆರ್ಟಿಕಲ್  370ರಡಿ ಭಾರತದ ಸಂವಿಧಾನ ಪ್ರಕಾರ ವಿಶೇಷ ಸ್ಥಾನಮಾನ ನೀಡಲಾಗಿದೆ. ಅದನ್ನು ಮೊದಲು ತೆಗೆದು ಹಾಕಿ. ಆಗ ಎಲ್ಲವೂ ಸರಿಯಾಗಲಿದೆ. ಸಮಾಜ ಸೈನಿಕರಿಗೆ ಮಹತ್ವ ನೀಡಬೇಕು ಎಂದರು. ರ್ಯಾಲಿಯಲ್ಲಿ ಜೆಸಿಇ, ಡಿಎಂಎಸ್, ಮಹಾರಾಣಿ ಸೇರಿದಂತೆ ಹಲವು ಕಾಲೇಜುಗಳ 162ರಿಂದ 180 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದಾರೆಂದು ತಿಳಿಸಿದರು.

ದರ್ಶನ್, ಪ್ರವೀಣ್, ಪುನೀತ್ ಗಣೇಶ್ ರ್ಯಾಲಿಯ ನೇತೃತ್ವ ವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: