ಮೈಸೂರು

ಮಂಡ್ಯದ ಯೋಧ ‘ಗುರು’ ಅಂತಿಮ ದರ್ಶನಕ್ಕೆ ಹೋಗುವ ಕುರಿತು ಕೇಳಿದರೆ ಉತ್ತರಿಸದೇ ಕಾಲ್ಕಿತ್ತ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ಫೆ.16:- ಮಂಡ್ಯದ ಯೋಧ ಗುರು ಅಂತಿಮ ದರ್ಶನಕ್ಕೆ ಹೋಗುವ ಕುರಿತು ಕೇಳಿದರೆ ಉತ್ತರಿಸದೇ ಮಾಜಿ ಸಿಎಂ ಸಿದ್ದರಾಮಯ್ಯ ಸ್ಥಳದಿಂದ ಕಾಲ್ಕಿತ್ತ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಅವರ ನಿವಾಸದ ಬಳಿ ಇಂದು  ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು. ಇದೊಂದು ಅಮಾನುಷ, ಹೇಯ ಕೃತ್ಯ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಸರ್ಕಾರ ಸಹ ಉಗ್ರರ ಬಗ್ಗೆ ಮೃದು ಧೋರಣೆ ತೋರಬಾರದು. ಉಗ್ರರ ವಿರುದ್ಧ ಉಗ್ರವಾದ ಕ್ರಮವನ್ನು ತೆಗೆದುಕೊಳ್ಳಬೇಕು. ನರೇಂದ್ರ ಮೋದಿಯವರು ಹೇಳಿದ್ದರು, ನಕಲಿ ನೋಟುಗಳು ಉಗ್ರರಿಗೆ ಹೋಗ್ತಿದ್ದವು. ಅದಕ್ಕೇ ನೋಟು ಅಮಾನ್ಯೀಕರಣ ಮಾಡಿದ್ದೀವಿ, ಅಂತ ಇದರಿಂದ ಏನು ಉಪಯೋಗವಾಗಿದೆ. ಕೇಂದ್ರ ಗುಪ್ತಚರ ಇಲಾಖೆ  ಟೋಟಲಿ ಫೆಲ್ಯೂರ್ ಆಗಿದೆ. ನಲವತ್ತು ಐವತ್ತು ಜನ ಸಾಯ್ತಾರೆ ಅಂದ್ರೆ ಏನರ್ಥ. 2500 ಜನ ಯೋಧರು ಹೋಗ್ತಿದ್ದರು. ಲಕ್ಕಿಲಿ ಏನೂ ಆಗಿಲ್ಲ. ಯೋಧರು ನಮಗೋಸ್ಕರ ಕೆಲಸ ಮಾಡ್ತಿದ್ದಾರೆ. ಸರ್ಕಾರ ಕೂಡಲೇ ಉಗ್ರರನ್ನು ಪತ್ತೆ ಹಚ್ಚಬೇಕು. ಉಗ್ರರ ಅಡಗುತಾಣಗಳನ್ನು ಪತ್ತೆಹಚ್ಚಬೇಕು,  ಉಗ್ರನಾಯಕರನ್ನು ಮೊದಲು  ನಾಶಮಾಡಬೇಕು ಎಂದರು.

ಮಂಡ್ಯದ ಹುತಾತ್ಮ ಯೋಧನ ಪಾರ್ಥೀವ ಶರೀರ ದರ್ಶನಕ್ಕೆ  ಹೋಗ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಲು  ಅವರು ನಿರಾಕರಿಸಿದ್ದು, ಯಾವುದೇ ಉತ್ತರ ಕೊಡದೆ ಸ್ಥಳದಿಂದ ಕಾಲ್ಕಿತ್ತರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: