ಪ್ರಮುಖ ಸುದ್ದಿಮೈಸೂರು

ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲು ಸಚಿವರ ಕರೆ

ಮೈಸೂರು: ರಸ್ತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸದಿದ್ದಲ್ಲಿ ಅಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.

ಅವರು ಇಂದು ಬೆಳಿಗ್ಗೆ ಪೊಲೀಸ್ ಇಲಾಖೆ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಅಖಿಲ ಭಾರತ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸದ್ದ ಕಾಲ್ನಡಿಗೆ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ರಸ್ತೆ ಸುರಕ್ಷತಾ ಸಪ್ತಾಹವನ್ನು ಒಂದು ವಾರ ಆಚರಿಸಿದರೆ ಸಾಲದು. ಅದನ್ನು ಪ್ರತೀ ಮಾಹೆ ಏರ್ಪಡಿಸಿದ್ದಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದು ಎಂದರು. ರಸ್ತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಉತ್ತಮ. ಇದರಿಂದಾಗಿ ಮಕ್ಕಳಲ್ಲಿ ರಸ್ತೆ ಸಂಚಾರಿ ನಿಯಮಗಳನ್ನು ಆಚರಿಸುವ ಬಗ್ಗೆ ಅರಿವು ಮಾಡಲಿದೆ. ಚಿಕ್ಕ ವಯಸ್ಸಿನಲ್ಲೇ ಸಂಚಾರಿ ನಿಯಮಗಳನ್ನು ಮನನ ಮಾಡುವುದರಿಂದ ಮಕ್ಕಳು ಬೆಳೆದಂತೆ ಈ ನಿಯಮಗಳನ್ನು ಅನುಸರಿಸಲು ಸಹಾಯಕವಾಗಲಿಗೆ ಎಂದರು.

ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬರುವ ವೃತ್ತಗಳಲ್ಲಿ ವಯಸ್ಸಾದವರು, ಅಂಧರು ಹಾಗೂ ವಿಕಲಚೇತನರು ರಸ್ತೆಯನ್ನು ದಾಟಲು ಬಹಳ ಕಷ್ಟ ಪಡುತ್ತಾರೆ. ಈ ಸಂದರ್ಭ ಅಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ನಿಯಂತ್ರಣಾಧಿಕಾರಿಗಳು, ಸಂಚಾರಿ ಪೊಲೀಸರು ಅವರನ್ನು ರಸ್ತೆ ದಾಟಿಸುವುದರ ಮೂಲಕ ಮಾನವೀಯತೆ ತೋರಬೇಕು ಎಂದರು.

ಇಂದಿನ ಜಾಥಾದಲ್ಲಿ ಸಚಿವ ತನ್ವೀರ್ ಸೇಠ್, ಪೊಲೀಸ್ ಅಧಿಕಾರಿಗಳು, ನಗರಪಾಲಿಕೆ ಆಯಕ್ತ ಜಗದೀಶ್ ಸೇರಿದಂತೆ 300 ಮಂದಿ ಪಾಲ್ಗೊಂಡು ಸಂಚಾರಿ ನಿಯಮಗಳ ವಿವಿಧ ಚಿಹ್ನೆಗಳನ್ನುಳ್ಳ ಭಿತ್ತಿ ಪತ್ರಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿದರು.

Leave a Reply

comments

Related Articles

error: