ಮನರಂಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 42ನೇ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು,ಫೆ.16-ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು 42ನೇ ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್ ವುಡ್ ತಾರೆಯರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ದರ್ಶನ್, ಈ ಬಾರಿ ನಾನು ಸರಳವಾಗಿ ಬರ್ತ್ ಡೇ ಆಚರಿಸುತ್ತಿರುವುದಕ್ಕೆ ಕಳೆದ ವರ್ಷ ನಡೆದ ಆಡಂಭರದ ಆಚರಣೆಯ ನೋವೇ ಕಾರಣ. ಕಳೆದ ಬಾರಿ ನನ್ನ ಅಭಿಮಾನಿಗಳು ನಾಲ್ಕು ಲಾರಿಗಳಲ್ಲಿ ಹೂವು, ಹೂವಿನ ಹಾರ ಹಾಗೂ ಕೇಕ್ ತಂದು ಸಂಬ್ರಮಿಸಿದ್ದರು. ಆದರೆ ಅದು ನಂತರ ವ್ಯರ್ಥವಾಗಿದ್ದು ನೋಡಿ ನನಗೆ ತುಂಬಾ ನೋವಾಗಿತ್ತು. ನಾನು ಬಗ್ಗೆ ಮಾತನಾಡಿ ದುಃಖ ತೋಡಿಕೊಂಡಿದ್ದೆ. ಆದರೆ ಬಾರಿ ಅಭಿಮಾನಿಗಳು ನನ್ನ ಮನವಿಗೆ ಸ್ಪಂದಿಸಿ ಸರಳ ಆಚರಣೆಗೆ ಒತ್ತು ನೀಡಿದ್ದಾರೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದರು.

ಅಭಿಮಾನಿಗಳು ತಂದಿರುವ ಸಕ್ಕರೆ, ಅಕ್ಕಿ ಬೇಳೆ ಹಾಗೂ ಬಟ್ಟೆಗಳನ್ನು ಕೆಲವು ಅನಾಥಾಶ್ರಮಗಳಿಗೆ ಕೊಟ್ಟು ಬರಲಿದ್ದೇವೆ. ಹೀಗೆ ಬಡವರಿಗೆ, ಅನಾಥರಿಗೆ ಅನುಕೂಲಕರ ಮಾಡಿಕೊಡುವ ಅರ್ಥಪೂರ್ಣ ಹುಟ್ಟುಹಬ್ಬದ ಅಚರಣೆಗೆ ನಾನು ಒತ್ತು ನೀಡಲಿದ್ದೇನೆ. ಹೀಗೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸುವ ನನ್ನ ಅಭಿಮಾನಿಗಳ ಮನಸ್ಥಿತಿಗೆ ನಾನು ನಿಜವಾಗಿಯೂ ಹೆಮ್ಮೆ ಪಡುತ್ತಿದ್ದೇನೆ ಎಂದಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಯೋಧರ ಆತ್ಕಕ್ಕೆ ಶಾಂತಿ ಕೋರಿರುವ ದರ್ಶನ್ ಅವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಜತೆಗೆ, `ದೇಶದ ಯೋಧರೇ ನಿಜವಾದ ಹೀರೋಗಳುಎಂದಿದ್ದಾರೆ.

ನಟಿ ಸುಮಲತಾ, ರಕ್ಷಿತಾ ಪ್ರೇಮ್, ನಟ ಜಗ್ಗೇಶ್, ನೆನಪಿರಲಿ ಪ್ರೇಮ್, ಧುವ ಸರ್ಜಾ, ಆದಿತ್ಯ, ನಿರ್ದೇಶಕರಾದ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್, ಪಿ ಅರ್ಜುನ್ ಸೇರಿದಂತೆ ಸಾಕಷ್ಟು ಚಿತ್ರರಂಗದ ಗಣ್ಯರು ದರ್ಶನ್ ಗೆ ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ.

ದರ್ಶನ್ ನಿಮಗೆ ನನ್ನ ಆಶೀರ್ವಾದ ಮತ್ತು ಪ್ರೀತಿ. ನೀನು ಪ್ರತಿಯೊಂದು ಮೆಟ್ಟಿಲು ಹತ್ತಿಕೊಂಡು ಇಂತಹ ದೊಡ್ಡ ಸ್ಥಾನಕ್ಕೆ ಬಂದಿದ್ದೀಯಾ. ಇದನ್ನು ನಾನು ಹೆಮ್ಮೆಯಿಂದ, ಖುಷಿಯಿಂದ ನೋಡಿಕೊಂಡು ಬಂದಿದ್ದೇನೆ. ಇಂದು ಮತ್ತು ಎಂದೆಂದಿಗೂ ನೀನು ಸಂತೋಷದಿಂದ ಇರಲಿ ಎಂದು ಆಶಿಸುತ್ತಾನೆ. ಹುಟ್ಟುಹಬ್ಬದ ಶುಭಾಶಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಟ್ವಿಟ್ ಮಾಡಿದ್ದಾರೆ ನಟಿ ಸುಮಲತಾ.

ನಟಿ ರಕ್ಷಿತಾ, ಹ್ಯಾಪಿ ಬರ್ತ್ ಡೇ ದರ್ಶನ್. ಖುಷಿಯಾಗಿರಿ.. ಚೆನ್ನಾಗಿರಿ.. ದೇವರು ಒಳ್ಳೆಯದು ಮಾಡಲಿ ಎಂದಿದ್ದಾರೆ.

ನಟ ಧ್ರುವ ಸರ್ಜಾ, ಹುಟ್ಟು ಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ಡಿಬಾಸ್ನೂರ್ಕಾಲ ಸುಖವಾಗಿ ಬಾಳಿಜೈ ಆಂಜನೇಯ ಎಂದು ಟ್ವಿಟ್ ಮಾಡಿದ್ದಾರೆ.

ನಟ ಜಗ್ಗೇಶ್, ದರ್ಶನ್ ಜೊತೆಗಿನ ಫೋಟೋವನ್ನು ಹಂಚಿಕೊಂಡು ಒಂದೇ ಸಾಲಿನಲ್ಲಿ ಬರ್ತ್ ಡೇ ಶುಭಾಶಯ ಹೇಳಿದ್ದಾರೆ. ಜಗ್ಗೇಶ್ ನಟನೆಯಅಗ್ರಜಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರ ಮಾಡಿದ್ದರು.

ನಟ ನೆನಪಿರಲಿ ಪ್ರೇಮ್ ತೂಗುದೀಪ ಪ್ರೊಡಕ್ಷನ್ಸ್ ನಲ್ಲಿ ಬಂದ ಮೊದಲ ಸಿನಿಮಾಜೊತೆ ಜೊತೆಯಲಿಚಿತ್ರದಲ್ಲಿ ನಾಯಕನಾಗಿದ್ದರು. ಇತ್ತೀಚಿಗಷ್ಟೆ ಪ್ರೇಮ್ ನಟನೆಯಚೌಕದಲ್ಲಿ ಸಹ ದರ್ಶನ್ ಒಂದು ಪಾತ್ರ ಮಾಡಿದ್ದರು. ಇದೀಗ ದರ್ಶನ್ ಬರ್ತ್ ಡೇ ಪ್ರೇಮ್ ಟ್ವಿಟ್ಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.

ನಿರ್ದೇಶಕ ಪವನ್ ಒಡೆಯರ್, ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್, ಜಮಾನದ ಯಜಮಾನ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಶುಭಹಾರೈಸಿದ್ದಾರೆ.

ನಟ ಆದಿತ್ಯ ದರ್ಶನ್ ಅವರ ಆಪ್ತ ಗೆಳೆಯರಲ್ಲಿ ಒಬ್ಬರು. ಇಬ್ಬರು ನಟರುಸ್ನೇಹನಾ ಪ್ರೀತಿನಾಹಾಗೂಚಕ್ರವರ್ತಿಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ದರ್ಶನ್ ಬರ್ತ್ ಡೇ ಗೆ ಆದಿತ್ಯ ಹ್ಯಾಪಿ ಬರ್ತ್ ಡೇ ಬ್ರದರ್. ನಿನಗೆ ದೇವರು ಯಶಸ್ಸು ನೀಡಲಿ ಎಂದು ವಿಶ್ ಮಾಡಿದ್ದಾರೆ.

ನಿರ್ದೇಶಕ ಸಂತೋಷ್ ಆನಂದ್ ರಾಮ್ ಮ್ಯಾನ್ ಆಫ್ ಮಾಸ್ ಎಂದು ದರ್ಶನ್ ಗೆ ಹೊಸ ಟೈಟಲ್ ನೀಡಿದ್ದಾರೆ. ಎಪಿ ಅರ್ಜುನ್ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ. ನಿಮ್ಮ ಆನೆ ನಡಿಗೆ ಹೀಗೆಯೇ ಮುಂದುವರಿಯಲಿ. ಸದಾ ಯಶಸ್ಸು ನಿಮ್ಮದಾಗಲಿ. ನೂರ್ಕಾಲ ನಗುತಾ ಸುಖವಾಗಿರಿ ಎಂದು ಶುಭ ಹಾರೈಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: